ಪುರಸಭೆಗೆ ಸೇರ್ಪಡೆಯಾಗಲು ಆತಂಕ ಬೇಡ

31sor5
Published on

ಸೊರಬ: ಪುರಸಭೆ ವ್ಯಾಪ್ತಿಗೆ ಒಳಪಡಲಿರುವ ಗ್ರಾಮೀಣ ಭಾಗದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಪಪಂ ನೂತನ ಅಧ್ಯಕ್ಷ ಎಂ.ಡಿ.ಉಮೇಶ್ ಹೇಳಿದರು.

ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುರಸಭೆಗೆ ಸೇರ್ಪಡೆಗೊಳ್ಳಲಿರುವ ಗ್ರಾಮಸ್ಥರಿಗೆ ತೆರಿಗೆ ಮತ್ತಿತರರ ಸೌಲಭ್ಯಗಳು ದುಬಾರಿಯಾಗಲಿವೆ ಎಂಬ ಆತಂಕ ಎದುರಾಗಿದೆ. ಆದರೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಮಾರ್ಗದರ್ಶನದಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಈಗಾಗಲೇ ಸುಸಜ್ಜಿತ ಸಂತೆ ಮೈದಾನ ನಿರ್ವಣಕ್ಕೆ 25 ಕೋಟಿ ರೂ. ಮಂಜೂರಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಕುಡಿಯುವ ನೀರು ಪೂರೈಕೆ, ರಸ್ತೆ ಸೇ ಅನೇಕ ಕಾಮಗಾರಿಗಳು ತಾಲೂಕಿನಲ್ಲಿ ನಡೆಯುತ್ತಿದ್ದು ಶಾಸಕರು ಅಭಿವೃದ್ಧಿಯ ವೇಗ ಹೆಚ್ಚಿಸಿದ್ದಾರೆ ಎಂದರು.

ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್ ಮಾತನಾಡಿ, ಜನತೆ ನೀಡಿದ ಅಧಿಕಾರವನ್ನು ಪ್ರಮಾಣಿಕವಾಗಿ ನಿಭಾಯಿಸುತ್ತೇನೆ. ಭ್ರಷ್ಟಾಚಾರ ಮುಕ್ತವಾಗಿ ಪಪಂನಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದರು.

ಬಿಜೆಪಿ ಹಿರಿಯ ಮುಖಂಡ ವೈ.ಜಿ.ಪುಟ್ಟಸ್ವಾಮಿ, ಅಶೋಕ್ ಶೇಟ್, ಕೃಷ್ಣಮೂರ್ತಿ ಕೊಡಕಣಿ, ಆರ್.ಮನವೇಲ್, ನಡಹಳ್ಳಿ ಲಕ್ಷ್ಮಣಪ್ಪ, ಕೆ.ಜಿ.ಬಸವರಾಜ್, ಹೂವಪ್ಪ ಯಂಕೇನ್, ಸುಧೀರ್ ಪೈ, ನಾಗರಾಜ್ ಭಂಡಾರಿ, ಗುರು ಮಳಲಗದ್ದೆ, ಕಾನಮನೆ ಬಸವರಾಜ್, ಲಿಂಗರಾಜ್, ಸಂತೋಷ್ ಕೊಡಕಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net