ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ

1 gok 4-Web
ಶಾಸಕ ಬಾಲಚಂದ್ರ ಅವರನ್ನು ಅರಬಾವಿ ಪಪಂ ಅಧ್ಯಕ್ಷ-ಉಪಾಧ್ಯಕ್ಷರು ಸತ್ಕರಿಸಿ ಅಭಿನಂದನೆ ಸಲ್ಲಿಸಿದರು. ಲಕ್ಷ್ಮಣ ನಿಂಗನ್ನವರ, ಸುಶೀಲಾ ಸಗರಿ, ಮುತ್ತೆಪ್ಪ ಝಲ್ಲಿ, ಅಶೋಕ ಖಂಡ್ರಟ್ಟಿ ಸತ್ತೆಪ್ಪ ಇದ್ದರು.
Published on

ಗೋಕಾಕ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.

ಸಮೀಪದ ಅರಬಾವಿ ಪಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಬೆಳಗಾವಿಯಲ್ಲಿ ನೀಡಿದ ಸನ್ಮಾನವನ್ನು ಸ್ವೀಕರಿಸಿ, ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಅರಬಾವಿ ಪಟ್ಟಣದ ಪ್ರಗತಿಗಾಗಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ತರಲಾಗುವುದು. ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲಾಗುವುದು ಎಂದು ಹೇಳಿದರು.

ಮುಖಂಡ ಮುತ್ತೆಪ್ಪ ಝಲ್ಲಿ, ಹಿಡಕಲ್ ಡ್ಯಾಂ ಘಯೋಮನೀಬ ಮಹಾಮಂಡಳಿ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪಪಂ ಸದಸ್ಯರಾದ ಪದ್ಮಾವತಿ ದೇವುಗೋಳ, ಮಹಾಂತೇಶ ನೇಮಗೌಡ್ರ, ಮೈಬೂಬ್ ಮುಲ್ಲಾ, ಬಸಪ್ಪ ಹನಮಸಾಗರ, ಶೋಭಾ ಬಸವರಾಜ ಆಲೋಶಿ, ಸುಶೀಲಾ ಕೆಂಚಪ್ಪ ಸಂಪಗಾಂವಿ, ವಿಠ್ಠಲ ಸಂತುಗೋಳ, ರವಿ ಹುಕ್ಕಿ, ಯಲ್ಲಪ್ಪ, ಮೋಹನ ಬಂಡಿವಡ್ಡರ, ಬಾಳೇಶ ಜಾಧವ, ಸತ್ತೆಪ್ಪ ಬಡಾಯಿ, ರಿಯಾಜ್ , ಬಸವರಾಜ ,ಪರಸಪ್ಪ,ಇಕ್ಬಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net