ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿ

04 MANVI 02
ಮಾನ್ವಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀ ವೀರೇಶ, ಉಪಾಧ್ಯಕ್ಷೆ ಮೀನಾಕ್ಷಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಶಾಸಕ ಹಂಪಯ್ಯನಾಯಕ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ವ್ಯವಸ್ಥಾಪಕ ಕೆ.ನರಸಿಂಹ ಇತರರಿದ್ದರು.
Published on

ಮಾನ್ವಿ: ಅಧ್ಯಕ್ಷರು-ಉಪಾಧ್ಯಕ್ಷರು ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀ ವೀರೇಶ, ಉಪಾಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ ಅಧಿಕಾರ ಸ್ವೀಕಾರ
ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಪ್ರತಿ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು. ತಾರತಮ್ಯ ಮಾಡದೇ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಅಧ್ಯಕ್ಷೆ ಲಕ್ಷ್ಮೀ ವೀರೇಶ ಮಾತನಾಡಿ, ಪಟ್ಟಣದಲ್ಲಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದರು.

ಉಪಾಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ, ಸದಸ್ಯರಾದ ಲಕ್ಷ್ಮೀದೇವಿ ನಾಯಕ, ಶಾಬೀರ್‌ಪಾಷಾ, ಸಂತೋಷಿ ಜಯಪ್ರಕಾಶ, ಸುಖಮುನಿ, ರೇವಣಸಿದಯ್ಯಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಗಾಪೂರಸಾಬ್, ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಸೈಯಾದ್ ಖಾಲಿದ್ ಖಾದ್ರಿ, ಸೈಯಾದ್ ನಜರುದ್ದೀನ್ ಖಾದ್ರಿ, ಜಿ.ನಾಗರಾಜ, ಸುಭಾಷನಾಯಕ, ರೌಡೂರು ಮಹಾಂತೇಶಸ್ವಾಮಿ, ಜಮಿಲ್ ಅಹಮದ್, ಸೇರಿದಂತೆ ಪುರಸಭೆ ಸದಸ್ಯರು ಇನ್ನಿತರರು ಇದ್ದರು.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net