ಪಟ್ಟಣ ಸಹಕಾರ ಬ್ಯಾಂಕ್‌ಗೆ ೪೧.೨೨ ಲಕ್ಷ ರೂ. ಲಾಭ

town bank
Published on

ಮಡಿಕೇರಿ: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ನ ೨೦೨೪-೨೫ನೇ ಸಾಲಿನ ಮಹಾಸಭೆ ಮಡಿಕೇರಿ ಕೊಡವ ಸಮಾಜದಲ್ಲಿ ಸೆ.೧೩ ರಂದು ನಡೆಯಲಿದೆ ಎಂದು ಎಂದು ಬ್ಯಾಂಕಿನ ಆಧ್ಯಕ್ಷ ಜಿ.ಎಂ.ಸತೀಶ್ ಪೈ ತಿಳಿಸಿದರು.

ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಪ್ರಸ್ತುತ ೨,೪೯೬ ಸದಸ್ಯರನ್ನು ಹೊಂದಿದೆ. ಅಲ್ಲದೇ, ಪ್ರಸಕ್ತ ಸಾಲಿನಲ್ಲಿ ೪೧.೨೨ ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸೆ.೧೩ರಂದು ನಡೆಯಲಿರುವ ಬ್ಯಾಂಕ್‌ನ ಮಹಾಸಭೆಗೆ ಬ್ಯಾಂಕ್‌ನ ಸದಸ್ಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್‌ನ ದುಡಿಯುವ ಬಂಡವಾಳ ೫೪.೪೧ ಕೋಟಿ ರೂ. ಆಗಿದೆ. ೪೮.೬೭ ಕೋಟಿ ರೂ. ವಿವಿಧ ಠೇವಣಾತಿಗಳನ್ನು ಹೊಂದಿದೆ. ಗ್ರಾಹಕರಿಗೆ ಮನೆ ಖರೀದಿ ಸಾಲ, ಜಾಮೀನು ಸಾಲ, ವಾಹನ ಸಾಲ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ ನೀಡುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷರಾದ ನಾಗೇಶ್, ನಿರ್ದೇಶಕರಾದ ಸಿ.ಕೆ.ಬಾಲಕೃಷ್ಣ, ಗಿರೀಶ್, ಬಿ.ಕೆ.ಜಗದೀಶ್, ರಾಜೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net