ಟೌನ್ ಬ್ಯಾಂಕ್‌ಗೆ ೧೫೪ ಲ.ರೂ. ಲಾಭ

Published on

ಪುತ್ತೂರು: ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ೨೦೨೩-೨೪ನೇ ಸಾಲಿನಲ್ಲಿ ೧೫೪ ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.೧೨ರಷ್ಟು ಡಿವಿಡೆಂಟ್ ನೀಡಿದೆ. ಹೆಚ್ಚಿನ ಮೊತ್ತವನ್ನು ಮೀಸಲು ನಿಽಗೆ ವರ್ಗಾಯಿಸಿದ್ದು, ಬ್ಯಾಂಕಿನ ಆರ್ಥಿಕ ಸ್ಥಿತಿ ಸದೃಢಗೊಳಿಸಲು ಕ್ರಮ ಕೈಗೊಂಡಿದೆ. ಪಕ್ಷ ಯಾರನ್ನೂ ನಂಬಿಕೊಂಡಿಲ್ಲ ಮತ್ತು ವ್ಯಕ್ತಿ ಪೂಜೆಯನ್ನು ಮಾಡುವುದಿಲ್ಲ. ೧೨ ಹಿರಿಯ ಹಾಗೂ ಯುವ ಜನರ ಅನುಭವಿ ತಂಡವನ್ನು ಆಯ್ಕೆ ಮಾಡಿದೆ ಎಂದು ಭಾರತೀಯ ಜನತಾ ಪಾರ್ಟಿ ಹಾಗೂ ಸಹಕಾರ ಭಾರತಿ ಪುತ್ತೂರು ಹೇಳಿದೆ.

ಭಾರತೀಯ ರಿಸರ್ವ್ ಭ್ಯಾಂಕ್ ನೇಮಿಸಿದ ಲೆಕ್ಕ ಪರಿಶೋಧಕರಿಂದ ಸತತವಾಗಿ ಎ ಗ್ರೇಡ್ ಪಡೆದುಕೊಂಡು ಬರುತ್ತಿದೆ. ಠೇವಣಿದಾರರ ಭದ್ರತೆಗಾಗಿ ಆರ್‌ಬಿಐ ನಿರ್ದೇಶನದಂತೆ ೫ ಲಕ್ಷ ವಿಮಾ ಸೌಲಭ್ಯವನ್ನು ನೀಡಲಾಗಿದೆ. ಖಾಸಗಿ ಬ್ಯಾಂಕ್‌ಗಳ ರೀತಿಯಲ್ಲಿ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಜತೆಗೆ ಎಲ್ಲರಿಗೂ ವಿಮಾ ಸೌಲಭ್ಯ, ಮೊಬೈಲ್ ಆಪ್ ಮೂಲಕ ಪಿಗ್ಮಿ ಸಂಗ್ರಹ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಒಟ್ಟು ವ್ಯವಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಜಂಟಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದೆ.

ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಎನ್ ಮಾತನಾಡಿ ಬ್ಯಾಂಕ್ ಮೇಲೆ ನೀಡಲಾದ ದೂರುಗಳಲ್ಲಿ ಹುರುಳಿಲ್ಲ ಎಂದು ತಿರಸ್ಕಾರವಾಗಿದೆ ಮತ್ತು ಈಗಾಗಲೇ ಮಾಡಿ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಎರಡು ಮಹಾಸಭೆಗೆ ಹಾಜರಾದವರು ಚುನಾವಣೆಗೆ ಅರ್ಹರಾಗಿದ್ದು, ಸುಮಾರು ೩೬೦೦ ಮಂದಿ ಮತದಾನಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಮೃತರಾದವರ ಹೆಸರನ್ನು ನೇರವಾಗಿ ಕೈಬಿಡಲಾಗುವುದಿಲ್ಲ. ಉತ್ತರಾಽಽಕಾರಿಗಳು ಅಗತ್ಯ ದಾಖಲೆಗಳನ್ನು ನೀಡಿದರೆ ಮಾತ್ರ ಅವರ ಹೆಸರು ತೆಗೆದು ಹಾಕಲು ಕಾನೂನಿನಲ್ಲಿ ಅವಕಾಶವಿದೆ. ಪಟ್ಟಿಯಲ್ಲಿ ಮೃತರ ಹೆಸರು ಇರುವ ವಿಚಾರ ಗಮನಕ್ಕೆ ಬಂದಿದ್ದು, ಅದನ್ನು ಸಂಬಂಧಪಟ್ಟವರಿಂದ ಅಗತ್ಯ ದಾಖಲೆ ತರಿಸಿ ಸರಿಪಡಿಸಲಾಗುವುದು ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ. ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಸಹಕಾರ ಭಾರತಿ ಅಧ್ಯಕ್ಷ ಕೃಷ್ಣ ಕುಮಾರ್ ರೈ, ರಾಜೇಶ್ ಕುಮಾರ್ ಬನ್ನೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net