

ಮಡಿಕೇರಿ:
ತೀವ್ರ ಕುತೂಹಲ ಮೂಡಿಸಿದ್ದ ಮಡಿಕೇರಿ ಪಟ್ಟಣ ಸಹಕಾರ ನಿಯಮಿತ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿ ಜಯ ಸಾಧಿಸಿದ್ದಾರೆ. ಒಟ್ಟು ೧೩ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ೧೨ ಅಭ್ಯರ್ಥಿಗಳು ಗೆದಿದ್ದು, ಸಾಮಾನ್ಯ ಕ್ಷೇತ್ರದ ಪೈಕಿ ಒಂದು ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಸಾಮಾನ್ಯ ಕ್ಷೇತ್ರದ ಒಟ್ಟು ೭ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಕನ್ನಂಡ ಸಂಪತ್, ಆರಾಧಾನಾ ಗಿರೀಶ್, ಸಿ.ಕೆ. ಬಾಲಕೃಷ್ಣ, ಬಿ.ಕೆ. ಜಗದೀಶ್, ಬಿ.ವಿ. ರೋಶನ್, ಜಿ.ಎಂ. ಸತೀಶ್ ಪೈ, ಗೋಕುಲ ಹಾಗೂ ಕಾಂಗ್ರೆಸ್ ಬೆಂಬಲಿತ ಬಿ.ವೈ. ರಾಜೇಶ್ ಗೆಲುವಿನ ನಗೆ ಬೀರಿದರು.
ಪರಿಶಿ?್ಟ ಜಾತಿ ವರ್ಗದಲ್ಲಿ ಬಿಜೆಪಿ ಬೆಂಬಲಿತ ಎಸ್. ಸಿ ಸತೀಶ್, ಮಹಿಳಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಪ್ರತಿಭಾ ಶೆಟ್ಟಿ ಮತ್ತು ಮಾಚಮ್ಮ, ಹಿಂದುಳಿದ ವರ್ಗ ಎ ವರ್ಗದಲ್ಲಿ ಬಿಜೆಪಿ ಬೆಂಬಲಿತ ಬಿ. ಎಂ. ರಾಜೇಶ್ ಮತ್ತು ಮಹೇಶ್ ಜೈನಿ, ಪರಿಶಿ?್ಟ ಪಂಗಡ ಕ್ಷೇತ್ರದಿಂದ ನಾಗೇಶ್ ಕೆ.ಆರ್ ಗೆಲುವು ಸಾಧಿಸಿದ್ದಾರೆ.
ಭಾನುವಾರ ಇಲ್ಲಿನ ಬಾಲಭವನದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೧೬೧೪ ಮತದಾರರ ಪೈಕಿ ೧,೩೭೨ ಮತದಾರರು ಮತಚಲಾಯಿಸಿದರು. ಸಂಜೆ ಮತ ಎಣಿಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಬಿ.ಕೆ. ವಿಜಯೇಂದ್ರ ಕಾರ್ಯನಿರ್ವಹಿಸಿದರು.