ಪ್ರಗತಿಯತ್ತ ಶ್ರೀ ಕೃಷ್ಣಾ ಸೌಹಾರ್ದ ಸಹಕಾರಿ

3
Published on

ಸಂಕೇಶ್ವರ: ಪಟ್ಟಣದ ಶ್ರೀ ಕೃಷ್ಣಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 12,94,267 ರೂ. ನಿವ್ವಳ ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಕುಮಾರ ಬಸ್ತವಾಡಿ ಹೇಳಿದರು.

ಪಟ್ಟಣದ ಶ್ರೀ ಕೃಷ್ಣಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಈಚೆಗೆ ಜರುಗಿದ 13ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘ 442 ಸದಸ್ಯರನ್ನು ಹೊಂದಿದೆ. 1 ಕೋಟಿ ರೂ. ಷೇರು ಬಂಡವಾಳ ಒಳಗೊಂಡಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.16 ಡಿವಿಡೆಂಟ್ ವಿತರಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸತ್ಕರಿಸಲಾಯಿತು. ಉಪಾಧ್ಯಕ್ಷ ಮಲ್ಲಪ್ಪ ಹಾಲಗಡಗಿ, ಸದಸ್ಯರಾದ ಗಣಪತಿ ಕುಟೋಳಿ, ಶಾಂತಾ ಬಸ್ತವಾಡಿ, ಅಣ್ಣಪ್ಪ ಕುಂಬಾರ, ರಾಮು ಕಾಕೋಳಿ, ಅರ್ಜುನ ಮರೆನ್ನವರ, ಪ್ರವೀಣ ಬಸ್ತವಾಡಿ, ಲಕ್ಷ್ಮೀ ಬಸ್ತವಾಡಿ, ಸುಶೀಲಾ ಜುಗಳೆ, ಮಂಗಲ ದೇಸಾಯಿ, ಶಾಲನ ಪಾಂಡವ, ಮುಖ್ಯ ಕಾರ್ಯನಿರ್ವಾಹಕ ಈರಗೌಡ ಪಾಟೀಲ, ಸಿಎ ಎಸ್.ಎಸ್.ಕಮತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net