ಏಳಿಗೆಯತ್ತ ಜಂಬಗಿ ವಿವಿಧೋದ್ದೇಶ ಪಿಕೆಪಿಎಸ್

15SAMBARAGI1
Published on

ಸಂಬರಗಿ: ಸಹಕಾರ ಸಂಘಕ್ಕೆ ಪ್ರಸಕ್ತ ವರ್ಷ 17.46 ಲಕ್ಷ ಲಾಭ ಆಗಿದು,್ದ ಸಹಕಾರಿಗಳಿಗೆ ಶೇ.8 ಲಾಭಾಂಶ ಘೋಷಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.

ಸಮೀಪದ ಜಂಬಗಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವಸಾಧರಣ ಸಭೆಯಲ್ಲಿ ಮಾತನಾಡಿದರು.

ಸಂಘ 1.80 ಕೋಟಿ ರೂ. ಠೇವಣಿ ಹೊಂದಿದೆ. ಸಹಕಾರಿಗಳಿಗೆ 7.28 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಾಲಗಾರ ಸದಸ್ಯರಿಗೆ 1 ಲಕ್ಷ ರೂ. ವರೆಗೆ ಅಪಘಾತ ಪರಿಹಾರ ವಿಮೆ ರಕ್ಷಣೆ ಒದಗಿಸಲಾಗಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಭಗವಾನ್ ಚವ್ಹಾಣ ವಾರ್ಷಿಕ ವರದಿ ಓದಿದರು. ಸಂಘದ ಉಪಾಧ್ಯಕ್ಷೆ ಅಲ್ಕಾ ರಣದೇವಿ, ನಿರ್ದೇಶಕರಾದ ಅರುಣ ಜಾಧವ, ರಾಜಾರಾಮ ಸಂಕಪಾಳ ಪಾಟೀಲ, ಬಸಪ್ಪ ಮಾಳಿ, ಸುಖದೇವ ಸೋಂಕರ್, ಕಷ್ಣ ಮೋಹಿತೆ, ನೀತಾ ಬೋರಾಡಿ, ಮೂರಸಿದ್ಧ ಕೋಳಿಕರ್, ರಾಜಾರಾಮ ಭಂಡಾರಿ, ಮನೋಹರ ನಾಯಕ, ಪಾಂಡುರಂಗ ಮಂಡಲಿ, ಮುಖಂಡರಾದ ವಿಠ್ಠಲ ಪೂಜಾರಿ, ಅರ್ಜುನ ವಾಘಮೋರೆ, ಪೋಪಟ ಜಾಧವ, ಸುನೀಲ ಪಾಟೀಲ, ಮುರಿಗೆಪ್ಪ ಮಾಳಿ, ಗೋಪಾಲ ಕೋಳಿಕರ್, ಡಾ.ಶಶಿಕಾಂತ ಕುಂಬಾರ, ಜಿತೇಂದ್ರ ಸೂರ್ಯವಂಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net