

ಬೈಲಹೊಂಗಲ: ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂ ಪ್ರಸಕ್ತ ಸಾಲಿನಲ್ಲಿ 18 ಲ ರೂ. ಲಾಭಗಳಿಸಿ ಪ್ರಗತಿ ಸಾಧಿಸಿದೆ ಎಂದು ಸಹಕಾರಿಯ ಉಪಾಧ್ಯ ವಿಶ್ವನಾಥ ಹಿರೇಮಠ ಹೇಳಿದರು.
ತಾಲೂಕಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಹಕಾರಿ ಸಂದ 21ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರಿಯು 832 ಸದಸ್ಯರನ್ನು ಹೊಂದಿದ್ದು, 16.91 ಲ ರೂ. ಷೇರು ಸಂಗ್ರಹಿಸಿದೆ. ಸಾರ್ವಜನಿಕರಿಂದ 91 ಲ ರೂ. ಠೇವಣಿ ಸಂಗ್ರಹಿಸಿ, 1.53 ಲ ರೂ. ಸಾಲ ವಿತರಿಸಿದೆ. 73 ಲ ರೂ. ಸ್ವಂತ ನಿಧಿ, 2.8 ಲ ರೂ. ದುಡಿಯುವ ಬಂಡವಾಳವಿದೆ ಎಂದರು.
ಸಹಕಾರಿಯ ಗೌರವಾಧ್ಯ ಪ್ರಮೋದಕುಮಾರ ವಕ್ಕುಂದಮಠ, ಅಧ್ಯ ಬಸಲಿಂಗಯ್ಯ ಹಿರೇಮಠ ಮಾತನಾಡಿ, ಸಕಾಲದಲ್ಲಿ ಸಾಲ ಪಡೆದ ಸದಸ್ಯರು ಮರುಪಾವತಿಸಿ ಸಂದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.
ನಿವೃತ್ತ ಭೂಮಾಪನ ಅಧಿಕಾರಿ ಚೆನ್ನಯ್ಯ ಸಿದ್ದರಾಮಯ್ಯ ಹಿರೇಮಠ, ನಿರ್ದೇಶಕ ಜೆ.ಕೆ.ಮುನವಳ್ಳಿಮಠ, ಎಸ್.ಎಸ್.ಸೊಪ್ಪಿಮಠ, ಆರ್.ಎಸ್.ನಾಶಿಪಡಿ, ನೀಲಲೋಚನಾ ಹಿರೇಮಠ, ಜಗದೀಶ ವಕ್ಕುಂದಮಠ, ಗೀತಾ ಗಚ್ಚಿನಮಠ, ಲೆಕ್ಕಪರಿಶೋಧಕ ಶಿವಾನಂದ ಪಡೆನ್ನವರ ಇತರರಿದ್ದರು.
ಕಾರ್ಯದರ್ಶಿ ಶಿವಾನಂದ ಹಿರೇಮಠ ಅಡಾವೆ ಪತ್ರಿಕೆ ಮಂಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ೇತ್ರಗಳ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.