

ಬೆಳಗಾವಿ: ಪೂಜ್ಯ ಕಲಾವತಿ ಆಯಿ ಅವರ ಆಶೀರ್ವಾದದಿಂದ ಅನಗೋಳ ರಸ್ತೆಯಲ್ಲಿ ಹಲವಾರು ಸಹಕಾರಿ ಸಂಘಗಳು ಆರಂಭಗೊಂಡು, ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿವೆ. ಪ್ರಸ್ತುತ ಪ್ರಾರಂಭವಾಗಿರುವ ಅನ್ಮೋಲ್ ಸೌಹಾರ್ದ ಸಂಘವು ಪ್ರಗತಿಯ ಮೈಲಿಗಲ್ಲುಗಳನ್ನು ದಾಟುತ್ತದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ಅನಗೋಳ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಬಳಿ ಸೋಮವಾರ ಪ್ರಾರಂಭವಾದ ಅನ್ಮೋಲ್ ಮಲ್ಟಿಪರ್ಪಸ್ ಸೌಹಾರ್ದ ಸಂಘದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರವು ಮಧ್ಯಮ ವರ್ಗ ಮತ್ತು ಬಡವರಿಗೆ ಉಪಯುಕ್ತವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ದೊರೆಯದ ಬಡವರಿಗೆ ಹೆಚ್ಚಿನ ಸಹಾಯ ನೀಡಿವೆ. ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ಸ್ಥಾಪಿಸುವಲ್ಲಿ ಬೆಂಬಲ ನೀಡಿವೆ. ಅನ್ಮೋಲ್ ಸೌಹಾರ್ದ ಸಂಘ ಪ್ರಾರಂಭವಾಗಿ 11 ವರ್ಷ ಕಳೆದಿವೆ ಮತ್ತು ಈ ಸೌಹಾರ್ದ ಸಂಘದ ಎರಡನೇ ಶಾಖೆ ಪ್ರಾರಂಭಿಸಲಾಗುತ್ತಿದೆ. ಈ ಸೌಹಾರ್ದ ಸಂಘವು ಅನೇಕರ ವ್ಯವಹಾರಕ್ಕೆ ಸಹಾಯ ಮಾಡಿದೆ ಎಂದು ಹೇಳಿ, ಈ ಶಾಖೆಯ ಮೊದಲ ಠೇವಣಿದಾರರು ಮತ್ತು ಖಾತೆದಾರರಿಗೆ ಠೇವಣಿ ರಸೀದಿ ವಿತರಿಸಿದರು.
ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಂಜೀವ ಕತ್ತಿಶೆಟ್ಟಿ ದೀಪ ಬೆಳಗಿಸಿದರು. ಸಂಘದ ಅಧ್ಯಕ್ಷ ದೇವೇಂದ್ರ ಬನ್ಸಲ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಅಶೋಕ ಕಾಗತಿಕರ ಸಂಸ್ಥೆಯ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ನೀಡಿದರು. ಸಂಚಾಲಕ ಪ್ರಸಾದ ಹಿರೇಮಠ, ಬಸವರಾಜ ಗಸ್ತಿ, ಸಂಜಯ ವಾಲಾವಲಕರ, ನೇಮಿನಾಥ ಹರದಿ, ಫೈಯಾಜ್ ಮಾರಫಾನಿ, ತಾನಾಜಿ ಕವಟಣಕರ, ಶ್ರೀಕಾಂತ ಅಲ್ಲನ್ನವರ, ರಮೇಶ ಕಾಳೆ, ಸುಚಿತಾ ಮಹಾಂತಶೆಟ್ಟಿ, ಸಾಕ್ಷಿ ತುಡಯೆಕರ ಇದ್ದರು. ಉಪಾಧ್ಯಕ್ಷ ಸಂಜಯ ಪಂಡಿತ ವಂದಿಸಿದರು.