ಪ್ರಗತಿಪಥದತ್ತ ಕಟಕೋಳ ಪಿಕೆಪಿಎಸ್​

1KATAKOL1
Published on

ಕಟಕೋಳ: ಸಂದ ಸದಸ್ಯರ ಸಹಕಾರ, ಸಿಬ್ಬಂದಿಯ ಸತತ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಿಂದ ಸಂ ಆರ್ಥಿಕ ಪ್ರಗತಿಪಥದತ್ತ ಸಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ 34.15 ಲ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂದ ಅಧ್ಯ ಸಂಗಮೇಶ ಶೆಟ್ಟಿಸದಾವರ್ತಿ ಹೇಳಿದರು.

ಸ್ಥಳಿಯ ಸಂದ ಗೋದಾಮಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.

ಸಂ 6.45.ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 13.78 ಕೋಟಿ ರೂ. ಸಾಲ ವಿತರಿಸಿದೆ. ಸಂ 24.90 ಕೋಟಿ ರೂ. ದುಡಿಯುವ ಬಂಡವಾಳ, ಷೇರು ಬಂಡವಾಳ 1.99 ಕೋಟಿ ರೂ. 2680 ಸದಸ್ಯರ ಸಂಖ್ಯೆ ಹೊಂದಿದೆ. 65 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದೆ. ಷೇರು ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗಿದೆ ಎಂದರು.

ರೈತರ ಅನುಕೂಲಕ್ಕಾಗಿ ನಮ್ಮ ಸಂದಲ್ಲಿಯೇ ಜಮೀನಿನ ಉತಾರ, ಋಣಭಾರ ಪತ್ರ ಹಾಗೂ ಸ್ಟಾಂಪ್​ ಪೇಪರ್​ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಆದೇಶದಂತೆ ಪಿಒಎಸ್​ ಮಿಷನ್​ ಮುಖಾಂತರ ಗೊಬ್ಬರ ವಿತರಿಸಬೇಕಿರುವುದರಿಂದ ಎಲ್ಲ ರೈತರು ಆಧಾರ್​ ಕಾರ್ಡ್​ ನಂಬರ್​ ಮೂಲಕ ಗೊಬ್ಬರ ಪಡೆದುಕೊಳ್ಳಬೇಕು. ರೈತರು ಸಾಂಪ್ರದಾಯಿಕ ಯೂರಿಯಾಗಿಂತ ಹೆಚ್ಚು ಗುಣಮಟ್ಟದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಸಿ ಕೃಷಿ ವೆಚ್ಚ ತಗ್ಗಿಸಬೇಕು. ಆಡಳಿತ ಮಂಡಳಿಯಿಂದ ಸಂದ ರೆತರಿಗೆ ಕಾರು, ಜೀಪ್​ ಇತ್ಯಾದಿ ವಾಹನ ಖರೀದಿಸಲು ಸಾಲ ವಿತರಿಸುವುದಾಗಿ ತಿಳಿಸಿದರು.

ಸಹಕಾರ ಕ್ಷೇತ್ರದ ಭೀಷ್ಮ ಸಿದ್ಧನಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರ್​.ಎ.ಹಾವಾಣ್ಣಿ ನಿರೂಪಿಸಿ ವಾರ್ಷಿಕ ವರದಿ ಓದಿದರು. ಉಪಾಧ್ಯ ಎಲ್​.ಬಿ.ದೇಸಾಯಿ, ನಿರ್ದೇಶಕರಾದ ಎಂ.ಎಂ.ಆತಾರ, ಎನ್​.ಬಿ.ದಂಡಿನದುರ್ಗಿ, ವೆಂಕಟೇಶ ಜಾಧವ, ವಿ.ಎ್​.ಕಣವಿ, ಎನ್​.ಡಿ.ಅಜ್ಜನ್ನವರ, ಎಸ್​.ಎಂ.ಕುಂಬಾರ, ಜಿ.ಎನ್​.ತೋಲಗಿ ಇತರರಿದ್ದರು. ಬಾಳನಗೌಡ ಹೊಸಮನಿ ಸ್ವಾಗತಿಸಿದರು. ನಿರ್ದೇಶಕ ಎಸ್​.ಎಚ್​.ವಾದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net