ಅಭಿವೃದ್ಧಿಯತ್ತ ಮಹಾಲಕ್ಷ್ಮೀ ಮಹಿಳಾ ಸೊಸೈಟಿ

web2
ಮುನವಳ್ಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಮಹಿಳಾ ಕೋ-ಆಪ್ ಸೊಸೈಟಿ 23ನೇ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷೆ ಶಾರದಾ ದ್ಯಾಮನಗೌಡರ ಮಾತನಾಡಿದರು. ಮಂಜುಳಾ ಮುರನಾಳ, ಲಕ್ಷ್ಮವ್ವ ಹೂಲಿ, ಕಸ್ತೂರಿ ನಲವಡೆ ಇತರರಿದ್ದರು.
Published on

ಮುನವಳ್ಳಿ: ಮಹಿಳಾ ಸಹಕಾರಿ ಪ್ರಗತಿಯತ್ತ ಸಾಗುತ್ತಿದೆ ಎಂದು ಅಧ್ಯಕ್ಷೆ ಶಾರದಾ ಪಂಚನಗೌಡ ದ್ಯಾಮನಗೌಡರ ಹೇಳಿದರು. ಪಟ್ಟಣದ ಶ್ರೀ ಮಹಾಲಕ್ಷ್ಮೀ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 23ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಮುಖ್ಯಕಾರ್ಯನಿರ್ವಾಹಕಿ ಮಂಜುಳಾ ಮುರನಾಳ ಮಾತನಾಡಿ, ಸಂಘವು 3,078 ಷೇರು ಸದಸ್ಯರು, 2.88 ಕೋಟಿ ರೂ. ಠೇವು ಹೊಂದಿದೆ. ಸದಸ್ಯರಿಗೆ 3.85 ಕೋಟಿ ರೂ. ಸಾಲ ವಿತರಿಸಿದ್ದು, ಪ್ರಸಕ್ತ ಸಾಲಿನಲ್ಲಿ 6.51 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.5 ಡಿವಿಡೆಂಡ್ ವಿತರಿಸಲಾಗುವುದು ಎಂದರು.

ಬಸನಗೌಡ ದ್ಯಾಮನಗೌಡರ, ಬಾಳಪ್ಪ ಹೂಲಿ, ಉಪಾಧ್ಯಕ್ಷೆ ಲಕ್ಷ್ಮವ್ವ ಹೂಲಿ, ನಿರ್ದೇಶಕರಾದ ಕಸ್ತೂರಿ ನಲವಡೆ, ನೇತ್ರಾ ಅಲಮನ್ನವರ, ಪವಿತ್ರಾ ದ್ಯಾಮನಗೌಡರ, ಹೇಮಾ ಗೀದಿಗೌಡ್ರ, ರಾಧಿಕಾ ಹಿಂಬರಕಿ, ಮುಕ್ತಾ ಪಶುಪತಿ, ಇಮಾಂಬಿ ಭೈರಕದಾರ, ಖಾಲೀದಾ ಅಮೀನಾಯ್ಕ, ಬಸವ್ವ ದೊಡಮನಿ, ಶಿಲ್ಪಾ ಕೆಳಗಡೆ, ಶಿವಲೀಲಾ ಕೊಡಬಳಿ, ಪ್ರಶಾಂತ ಅಳಗವಾಡಿ, ಪಂಚಪ್ಪ ಗುಂಡ್ಲೂರ, ಸುವರ್ಣಾ ಅಂಕಲಗಿ, ಹಣಮಂತ ಕರೀಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net