

ಬೈಲಹೊಂಗಲ: ಬ್ಯಾಂಕಿಂಗ್ ೇತ್ರದಲ್ಲಿ ಹೆಸರಾಗಿರುವ ದಿ.ಬೈಲಹೊಂಗಲ ಅರ್ಬನ್ ಕೋ&ಆಪ್ ಬ್ಯಾಂಕ್ 2024&25ನೇ ಸಾಲಿನಲ್ಲಿ 1.80 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯ ಡಾ.ಬಿ.ಎಚ್.ಮೆಟಗುಡ್ಡ ತಿಳಿಸಿದರು.
ನಗರದ ಬಿ.ಬಿ.ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಿ.ಬೈಲಹೊಂಗಲ ಅರ್ಬನ್ ಕೋ&ಆಪ್ ಬ್ಯಾಂಕ್ನ 100ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.
ಬ್ಯಾಂಕ್ 7.30 ಕೋಟಿ ರೂ.ಲಾಭಗಳಿಸಿ, ಎಲ್ಲರ ಸಹಕಾರದಿಂದ ಪ್ರಗತಿ ಪಥದತ್ತ ಸಾಗಿದೆ. ಬ್ಯಾಂಕ್ 419.94 ಕೋಟಿ ರೂ. ಠೇವು, 278.76 ಕೋಟಿ ರೂ. ಸಾಲ&ಮುಂಗಡ, 48.00 ಕೋಟಿ ರೂ., ಷೇರು ಬಂಡವಾಳ ಮತ್ತು ಸ್ವಂತ ನಿಧಿ ಹಾಗೂ 476.75 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಬ್ಯಾಂಕ್ನ ಒಟ್ಟು ವ್ಯವಹಾರ 700 ಕೋಟಿ ರೂ. ತಲುಪಲಿದೆ ಎಂದರು.
ಬ್ಯಾಂಕ್ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ಖಾಯಂ ಸದಸ್ಯರ ಪ್ರತಿಭಾವಂತರ ಮಕ್ಕಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಸದಸ್ಯರು ಮರಣ ಹೊಂದಿದಲ್ಲಿ 5,000 ರೂ. ನೀಡುತ್ತಿದೆ. 25 ವರ್ಷ ಸದಸ್ಯತ್ವ ಪೂರೈಸಿದ ಸದಸ್ಯರಿಗೆ 1,000 ರೂ ಗೌರವಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಡಾ.ಬಿ.ಎಸ್.ಮಹಾಂತಶೆಟ್ಟಿ ಅಧ್ಯತೆ ವಹಿಸಿದ್ದರು, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಬ್ಯಾಂಕ್ ಉಪಾಧ್ಯ ಎಂ.ಆರ್.ಬೋಳನ್ನವರ, ನಿರ್ದೇಶಕರಾದ ಎಂ.ಎಂ.ಮೆಟಗುಡ್ಡ, ಎ.ಎಸ್.ಮೆಟಗುಡ್ಡ, ಎಸ್.ಬಿ.ಪತ್ತೆನ್ನವರ, ಆರ್.ಎಂ.ಮೆಟಗುಡ್ಡ, ಬಿ.ವಿ.ಸಾಲಿಮಠ, ಸಿ.ವಿ.ಹೊಸೂರ, ಎಂ.ಎ.ನಾಯಕ, ವಿ.ಎಸ್.ಮೆಟಗುಡ್ಡ, ಜಿ.ಸಿ.ಮೆಟಗುಡ್ಡ, ವಿ.ಎಸ್.ಬೆಳವಡಿ, ಬಿ.ಬಿ.ಮಡಿವಾಳರ, ಬಿ.ವೈ.ಬೆಟಗೇರಿ, ಎ.ಎಂ.ಮೆಟಗುಡ್ಡ, ಎಸ್.ಬಿ.ಮೆಟಗುಡ್ಡ, ಆರ್.ಎಸ್.ಬಿಳ್ಳೂರ, ಕೆ.ಎಂ.ಹೊಸೂರ, ಎಸ್.ಜಿ.ಬೂದಯ್ಯನವರಮಠ, ಎಸ್.ಎಸ್.ಭಾವಿಹಾಳ ಇತರರಿದ್ದರು, ಎಸ್.ಬಿ.ಗೀರನವರ ಇತರರಿದ್ದರು.