

ಚಿಕ್ಕೋಡಿ: ಹಾಲಟ್ಟಿ ವಿವಿಧೋದ್ದೇಶ ಪಿಕೆಪಿಎಸ್ ಸಂಘ ಆರ್ಥಿಕ ವರ್ಷದಲ್ಲಿ 1.34 ಲಕ್ಷ ರೂ. ಲಾಭಗಳಿಸಿದೆ ಎಂದು ಅಧ್ಯಕ್ಷ ಬಿ.ಎ.ಚೆನ್ನವರ ಹೇಳಿದರು.
ತಾಲೂಕಿನ ಹಾಲಟ್ಟಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, 52.91 ಲಕ್ಷ ರೂ. ಠೇವು, 17.36 ಲಕ್ಷ ರೂ. ಷೇರು ಬಂಡವಾಳ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 73.31 ಲಕ್ಷ ರೂ. ಬೆಳೆಸಾಲ ವಿತರಿಸಿ ಪ್ರಗತಿಪಥದಲ್ಲಿ ಮುನ್ನಡೆದಿದೆ ಎಂದರು.
ಸಂಘದ ಮುಖ್ಯಕಾರ್ಯನಿವಾಹಕ ಸಾಗರ ಈರಗಾರ ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷ ಬಿ.ಡಿ.ಅರಬಾಂವಿ, ನಿರ್ದೇಶಕರಾದ ಶಿವಾಜಿ ನಿಕ್ಕಂ, ಅಪ್ಪಾಸಾಹೇಬ ಚೆನ್ನವರ, ಮಹಾಂತೇಶ ಲಿಂಬಿಗಿಡದ, ವಿಠ್ಠಲ ಚೆನ್ನವರ, ಅಪ್ಪಾಸಾಹೇಬ ಡಂಗೇರ, ಸುನೀಲ ಚೆನ್ನವರ, ರೂಪಾ ಚೆನ್ನವರ, ಶಾಹಿದಾ ಝಾಡವಾಲೆ, ರಾಜು ಹಜುಲ್ಲನ್ನವರ ಇತರರಿದ್ದರು.