ಎಪಿಎಂಸಿ ಅಭಿವೃದ್ಧಿಗೆ ಮುಂದಾಗಿ

ಕಂಪ್ಲಿಯಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ನಗರ ಅಧ್ಯಕ್ಷ ಎನ್.ತಿಮ್ಮಪ್ಪ ಮಾತನಾಡಿದರು. ಪ್ರಮುಖರಾದ ವಿ.ಟಿ.ನಾಗರಾಜ, ಆದೋನಿ ರಂಗಪ್ಪ, ಬಿ.ಮಲ್ಲಿಕಾರ್ಜುನ, ಲಬೇದ ಯಮುನಪ್ಪ ಇತರರಿದ್ದರು.
ಕಂಪ್ಲಿಯಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ನಗರ ಅಧ್ಯಕ್ಷ ಎನ್.ತಿಮ್ಮಪ್ಪ ಮಾತನಾಡಿದರು. ಪ್ರಮುಖರಾದ ವಿ.ಟಿ.ನಾಗರಾಜ, ಆದೋನಿ ರಂಗಪ್ಪ, ಬಿ.ಮಲ್ಲಿಕಾರ್ಜುನ, ಲಬೇದ ಯಮುನಪ್ಪ ಇತರರಿದ್ದರು.
Published on

ಕಂಪ್ಲಿ: ಎಪಿಎಂಸಿ ಅಭಿವೃದ್ಧಿಗೆ ಆಡಳಿತ ಮಂಡಳಿ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರ ಅಧ್ಯಕ್ಷ ಎನ್.ತಿಮ್ಮಪ್ಪ ಹೇಳಿದರು.

ನಗರದ ಅತಿಥಿಗೃಹ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದರು. ಎಪಿಎಂಸಿ ಪ್ರಾಂಗಣದಲ್ಲಿ ನೀರು ಹಾಗೂ ಬೀದಿ ದೀಪದ ವ್ಯವಸ್ಥೆಯಿಲ್ಲ. ಹೆಚ್ಚು ಗಿಡಗಳು ಬೆಳೆದಿದ್ದರಿಂದ ವಿಷಜಂತುಗಳ ಭಯವಿದೆ. ಭತ್ತ, ಮೆಕ್ಕೆಜೋಳ, ಮೆಣಸಿನಕಾಯಿ ಒಣಗಿಸುವಾಗ ರೈತರು ಕತ್ತಲಲ್ಲೇ ಇರಬೇಕಿದೆ. ಎಪಿಎಂಸಿ ಪ್ರಾಂಗಣವನ್ನು ಸ್ವಚ್ಚಗೊಳಿಸಬೇಕು. ಮಳಿಗೆ ಪಡೆದ ವರ್ತಕರು ಎಪಿಎಂಸಿಯಲ್ಲೇ ವ್ಯಾಪಾರ ಮಾಡುವಂತೆ ಕ್ರಮವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ ಶಾಖೆ, ಎಟಿಎಂ ಸೌಲಭ್ಯ ಕಲ್ಪಿಸಬೇಕು. ಬಾಳೆ ಮಾರುಕಟ್ಟೆ ಆರಂಭಿಸಬೇಕು. ಮೂಲಸೌಕರ್ಯ ಒದಗಿಸುವಲ್ಲಿ ಆಡಳಿತ ಮಂಡಳಿ ಮುಂದಾಗಬೇಕು. ಎಪಿಎಂಸಿ ಅಭಿವೃದ್ಧಿ ಕುರಿತು ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಹತ್ತು ದಿನದಲ್ಲಿ ಬೇಡಿಕೆ ಈಡೇರಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಡಲಾಗುವುದು ಎಂದು ಎಚ್ಚರಿಸಿದರು.

ಕೋಶಾಧ್ಯಕ್ಷ ಟಿ.ಗಂಗಣ್ಣ ಮಾತನಾಡಿ, ಭತ್ತ ನಷ್ಟದ ಪರಿಹಾರ ಇನ್ನು ರೈತರ ಖಾತೆಗೆ ಜಮಾ ಮಾಡಿಲ್ಲ. ಮೆಣಸಿನಕಾಯಿ ಶೀತಲ ಗೋದಾಮನ್ನು ಕಂಪ್ಲಿಯಲ್ಲಿಯೇ ನಿರ್ಮಿಸಬೇಕು. ಶಾಶ್ವತ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ರೈತ ಸಂಪರ್ಕ ಕೇಂದ್ರದ ಸೌಲಭ್ಯಗಳನ್ನು ಸಮರ್ಪಕವಾರಗಿ ಒದಗಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ವಿ.ಟಿ.ನಾಗರಾಜ, ತಾಲೂಕು ಗೌರವಾಧ್ಯಕ್ಷ ಆದೋನಿ ರಂಗಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನ, ಪ್ರಮುಖರಾದ ಲಬೇದ ಯಮುನಪ್ಪ, ಎನ್.ಈರಣ್ಣ, ಎನ್.ನಾಗಪ್ಪ, ಎನ್.ನಾಗರಾಜ, ಆದೋನಿ ನಾಗರಾಜ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net