

ಬಾಗಲಕೋಟೆ: ಬಾಗಲಕೋಟೆ-ಮುಧೋಳ ಹೆದ್ದಾರಿಯ ಛಬ್ಬಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಆ ಕಾರುಗಳು ಚಾಲಕರಿಬ್ಬರೂ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ದಾಡಿಭಾಯಿ ತಾಂಡಾ ನಿವಾಸಿ ಸಾಗರ ಲಮಾಣಿ(29) ಮತ್ತು ವಾಂಬೆ ಕಾಲನಿ ನಿವಾಸಿ ರಂಗಪ್ಪ ಕಟ್ಟಿಮನಿ(26) ಮೃತ ದುರ್ದೈವಿಗಳು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ
ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.