

ಸಿದ್ದಾಪುರ: ಕಬ್ಬಿಣದ ಗೇಟ್ ಅಳವಡಿಸಿ ಬಂದ್ ಮಾಡಿದ್ದರೂ ಅಪಾಯಕಾರಿ ಸ್ಥಳಕ್ಕೆ ತೆರಳಿ ಫೋಟೋ ಹೊಡೆಯುತ್ತಿದ್ದ ಪ್ರವಾಸಿಗರನ್ನು ಅಪರ ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಜೋಗದಲ್ಲಿ ನಡೆಯಿತು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಸ್ಥಳ ಪರಿಶೀಲನೆಗಾಗಿ ಶುಕ್ರವಾರ ಸಿದ್ದಾಪುರ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜೋಗ ಜಲಪಾತದ ಕೆಳಗಿನ ಗೇಟ್‌ನ್ನು ಬಂದ್ ಮಾಡಿದ್ದರೂ ಕೆಲವು ಹೊರ ರಾಜ್ಯದ ಪ್ರವಾಸಿಗರು ಅದನ್ನು ದಾಟಿಕೊಂಡು ಹೋಗಿ ಫೋಟೋ ತೆಗೆಯುತ್ತಿದ್ದರು. ಅಪಾಯ ಸಂಭವಿಸಬಹುದಾಗಿದ್ದರಿAದ ಸಾಜಿದ್ ಮುಲ್ಲಾ ಅವರು ಅವರನ್ನು ತರಾಟೆಗೆ ತೆಗೆದುಕೊಂಡು ವಾಪಸ್ ಕರೆಸಿದರು. ಮತ್ತು ತೆರಳದಂತೆ ಎಚ್ಚರಿಕೆ ನೀಡಿದರು.