

ಚಿಕ್ಕಮಗಳೂರು: ಕಾಫಿನಾಡಿನ ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು ಕಂಡುಬAದಿದ್ದು, ಗಾಳಿ-ಮಳೆಯ ನಡುವೆ ಟ್ರಾಫಿಕ್‌ನಲ್ಲಿ ಸಿಲುಕಿ ಪ್ರವಾಸಿಗರು ಪರದಾಡುವಂತಾಗಿತ್ತು.
ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡ ಪ್ರವಾಸಿತಾಣ ಪ್ರಸಿದ್ಧಿ ಪಡೆದಿದ್ದು, ವಾರಂತ್ಯವಾದ ಭಾನುವಾರ ಸಾವಿರಾರು ಪ್ರವಾಸಿಗರು ಭೇಟಿನೀಡಿದ್ದಾರೆ. ಹಚ್ಚಹಸಿರನ್ನು ಹೊಂದಿರುವ ಈ ಸ್ಥಳ ಮನಸ್ಸಿಗೆ ಮುದ ನೀಡುವುದರಿಂದ ಪ್ರವಾಸಿಗರು ಲಗ್ಗೆಇಟ್ಟಿದ್ದಾರೆ.
ಸುಯ್ ಎಂದು ಬೀಸುವ ಗಾಳಿಗೆ, ಆ ಸ್ಥಳದಲ್ಲಿ ಸುರಿಯುತ್ತಿರುವ ಮಳೆಗೆ ಮೈಯೊಡ್ಡಿದ್ದಾರೆ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋಲದವರಿಲ್ಲ ಹಾಗಾಗಿ ವಾರದ ಕೊನೆಯ ದಿನವಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಸರ್ವೆಸಾಮಾನ್ಯವಾಗಿದೆ.
ದೊಡ್ಡ ಬಸ್ಸಿನಲ್ಲಿ ಬಂದ ಪ್ರವಾಸಿಗರಿಂದ ಟ್ರಾಫಿಕ್ ಜಾಮ್‌ಆಗಿದ್ದು, ನೂರಾರು ಪ್ರವಾಸಿಗರು ಪರದಾಡುವಂತಾಯಿತು. ಎರಡು ಗಂಟೆಗೂ ಹೆಚ್ಚುಕಾಲ ಪ್ರವಾಸಿ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು.ಮಳೆ ನಡುವೆ ಟ್ರಾಫಿಕ್‌ನಲ್ಲೆ ನೆನೆದು ತೊಪ್ಪೆಯಂತಾದರು.
ವಾರAತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದೇವರಮನೆ ಗುಡ್ಡಕ್ಕೆ ಆಗಮಿಸುತ್ತಾರೆ. ಸ್ಥಳೀಯರು ಇಲ್ಲಿಗೆ ತೆರಳುವುದು ಸರ್ವೆಸಾಮಾನ್ಯವಾಗಿದೆ. ಹಾಗಾಗಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸರನ್ನು ನೇಮಿಸುವುದು ಸೂಕ್ತವಾಗಿದೆ.
ಟ್ರಾಫಿಕ್‌ಜಾಮ್ ಆಗಿದ್ದರಿಂದ ದೇವರ ಮನೆಗೆ ತೆರಳಲು ಇಂದು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.