

ಸಿದ್ದಾಪುರ: ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿರುವ ನಿಪ್ಲಿ ಫಾಲ್ಸ್ನ ಜಲಧಾರೆ ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಮಳೆಗಾಲ ಆರಂಭವಾದಾಗಿನಿಂದ ನಿಪ್ಲಿ ಫಾಲ್ಸ್ ನೋಡಲು ಜಿಲ್ಲೆ ಹಾಗೂ ರಾಜ್ಯ ವಿವಿಧ ಕಡೆಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಸರ್ಕಾರಿ ರಜಾ ದಿನದಲ್ಲಂತು ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಿರುತ್ತಿದೆ.
ಪ್ರತಿವರ್ಷ ಮಳೆಗಾಲ ಆರಂಭದ ಐದಾರು ತಿಂಗಳು ಹುಸೂರು ಡ್ಯಾಂನಲ್ಲಿ ನೀರು ತುಂಬಿರುವುದರಿಂದ ಅದರ ಕೆಳಭಾಗದಲ್ಲಿರುವ ನಿಪ್ಲಿ ಫಾಲ್ಸ್ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.
ಯಾವುದೇ ಆತಂಕ ಇಲ್ಲದೆ ನಿತ್ಯ ಮಕ್ಕಳಿಂದ ಹಿಡಿದು ಮಹಿಳೆಯರು, ವೃದ್ಧರು ಫಾಲ್ಸ್ ನೋಡುವುದಕ್ಕೆ ಆಗಮಿಸುತ್ತಿದ್ದಾರೆ. ತಾಲೂಕಿನ ಹಾಗೂ ಸ್ಥಳೀಯ ಕೆಲವರು ನಿತ್ಯವೂ ಫಾಲ್ಸ್ ವೀಕ್ಷಿಸಿ ಹಾಲ್ನೊರೆಯಂತಿರುವ ಜಲಧಾರೆಯಲ್ಲಿ ಮಿಂದೆದ್ದು ಸಂತಸಪಡುತಿದ್ದಾರೆ.
ಫಾಲ್ಸ್ಗೆ ಹೋಗುವ ದಾರಿ: ಸಿದ್ದಾಪುರದಿಂದ ಮಾವಿನಗುಂಡಿ ರೋಡ ಹಲಗೇರಿ 9 ಕಿಮೀ, ಹಲಗೇರಿಯಿಂದ ನಿಪ್ಲಿ ರೋಡ್ ನಿಪ್ಲಿ ಫಾಲ್ಸ್ 3 ಕಿಮೀ.