ಉಣಕಲ್ಲ ಕೆರೆ ಪ್ರವಾಸಿ ತಾಣವಾಗಿಸಲು ಪ್ರಯತ್ನ

UNKALL NEW
Published on

ಹುಬ್ಬಳ್ಳಿ : ಉಣಕಲ್ಲ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ಪ್ರಯತ್ನಿಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಉಣಕಲ್ಲ ಸಿದ್ದಪ್ಪಜ್ಜನ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ತುಂಬಿ ಹರಿಯುತ್ತಿರುವ ಉಣಕಲ್ಲ ಕೆರೆಗೆ ಮಂಗಳವಾರದಂದು ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಶಾಸಕ ಟೆಂಗಿನಕಾಯಿ, ಕೆರೆಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಬೇಕಿದೆ ಎಂದು ತಿಳಿಸಿದರು.

ಕೆರೆಯಲ್ಲಿ ಮೇಲಿಂದ ಮೇಲೆ ಅಂತರ ಗಂಗೆ, ಗಿಡ-ಗಂಟಿಗಳು ಬೆಳೆಯುತ್ತಿವೆ. ಕಾಲಕಾಲಕ್ಕೆ ಕೆರೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಹೇಳಿದರು.

ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೋರವಿ, ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ, ಪ್ರಮುಖರಾದ ಪರಶುರಾಮ ಹೊಂಬಳ, ರಾಮನಗೌಡ್ರ ಶೆಟ್ಟನಗೌಡ್ರ, ಬಾಬು ಹುಟಗಿ, ಬಿಜೆಪಿ ವಕ್ತಾರ ರವಿ ನಾಯಕ, ಕರಬಸು ಮಾಡಳ್ಳಿ ,ಎಂ.ಡಿ. ಮೆಣಸಿನಕಾಯಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net