

ಭಟ್ಕಳ: ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನೊರ್ವನನ್ನು ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಕರಾವಳಿ ಪೊಲೀಸ್ ಪಡೆ ರಕ್ಷಿಸಿ ದಡಕ್ಕೆ ಕರೆ ತಂದ ಘಟನೆ ಬುಧವಾರ ಮುರ್ಡೆಶ್ವರ ಕಡಲ ತೀರದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣದ ಕೆ. ಗೊಲ್ಲಹಳ್ಳಿ ನಿವಾಸಿ ಕೆ. ಗೋವಿಂದರಾಜು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗ.
ತನ್ನ ಗೆಳೆಯರೊಂದಿಗೆ ಪ್ರವಾಸಕ್ಕೆಂದು ಬಂದು ಸಮುದ್ರ ಸೆಳತಕ್ಕೆ ಒಳಗಾಗಿ ಕೊಚ್ಚಿ ಹೋಗುತ್ತಿದ್ದ. ಇದನ್ನು ಕಂಡ ಕರಾವಳಿ ಕಾವಲು ಪಡೆಯ ಕೆಎನ್ಡಿ ಸಿಬ್ಬಂದಿ ಪುಂಡಲೀಕ ನಾಯ್ಕ, ಜಗದೀಶ ಹರಿಕಾಂತ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ರಾಜೇಶ, ರವೀಂದ್ರ, ಅನೀಲ ಮತ್ತು ಅಣ್ಣಪ್ಪ ಕೂಡಲೆ ಸಮುದ್ರಕ್ಕೆ ಜಿಗಿದು ಪ್ರವಾಸಿಗ ಗೋವಿಂದರಾಜುನನ್ನು ರಕ್ಷಿಸಿದ್ದಾರೆ.