

ಗೋಕರ್ಣ: ಇಲ್ಲಿನ ಕುಡ್ಲೆ ಸಮುದ್ರದಲ್ಲಿ ನೀರಿನ ಸುಳಿಗೆ ಸಿಲುಕಿದ್ದ ಇಟಲಿ ಪ್ರವಾಸಿಗನನ್ನು ಲೈಫ್‌ಗಾರ್ಡ್‌ಗಳು ಮತ್ತು ಟೂರಿಸ್ಟ್ ಬೋಟ್ ನಿರ್ವಹಣೆ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ. ಜಾರ್ಜ್ (83) ರಕ್ಷಿತ ಪ್ರವಾಸಿ.
ಬುಧವಾರ ಸೂರ್ಯಾಸ್ತದ ವೇಳೆ ಇಬ್ಬರು ಪ್ರವಾಸಿಗರು ಈಜಲು ತೆರಳಿದ್ದರು. ಸಮುದ್ರ ಒರಟಾಗಿರುವುದರ ಜತೆಗೆ ಸೂರ್ಯಾಸ್ತದ ವೇಳೆ ಕತ್ತಲು ಆವರಿಸುತ್ತಿರುವ ಹಿನ್ನೆಲೆಯಲ್ಲಿ ಬೀಚ್‌ನಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ನೀರಿಗಿಳಿಯದಂತೆ ಎಚ್ಚರಿಸಿದ್ದರೂ ಲೆಕ್ಕಿಸದೆ ನೀರಿಗಿಳಿದು ತೊಂದರೆಗೊಳಗಾದರು ಎಂದು ಸ್ಥಳದಲ್ಲಿದ್ದ ಇನ್ನಿತರ ವಿದೇಶಿ ಪ್ರವಾಸಿಗರು ಸಾರ್ವಜನಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.