

ಕಾರವಾರ: ಕ್ರಿಸ್‌ಮಸ್, ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು Tourist places ತುಂಬಿ ತುಳುಕುತ್ತಿವೆ. ಹೋಟೆಲ್, ರೆಸಾರ್ಟ್ಗಳು ಮೊದಲೇ ಬುಕ್ ಆಗಿದ್ದು, ಈಗಾಗಲೇ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದಾರೆ. ಡಿಸೆಂಬರ್ 25 ಕ್ರಿಸ್‌ಮಸ್ ರಜೆ ಇದೆ. 26 ಹಾಗೂ 27 ರಂದು ಮಾತ್ರ ಕರ್ತವ್ಯದ ದಿನಗಳಾಗಿವೆ. ಡಿ. 28 ಐಟಿ ಉದ್ಯೋಗಿಗಳ ವೀಕೆಂಡ್ ಆಗಿದ್ದರೆ, ಸರ್ಕಾರಿ ಕಚೇರಿಗಳಿಗೆ ನಾಲ್ಕನೇ ಶನಿವಾರದ ರಜೆ, ನಂತರ 29 ರಂದು ಭಾನುವಾರದ ರಜೆ ಇದೆ ಹಾಗಾಗಿ ವೀಕೆಂಡ್ ಮಸ್ತಿಗಾಗಿ ಬೆಂಗಳೂರು, ಪುಣೆ, ಮುಂಬೈ ಮುಂತಾದೆಡೆಗಳಿAದ ಪ್ರವಾಸಿಗರು ದಾಂಡೇಲಿ, ಜೊಯಿಡಾ, ಗೋಕರ್ಣ, ಕಾರವಾರ, ಮುರ್ಡೇಶ್ವರ ಹೀಗೆ ವಿವಿಧೆಡೆ ಆಗಮಿಸುತ್ತಿದ್ದಾರೆ.
ಹೊಸ ವರ್ಷ ಆಚರಣೆಗೆ ದೇಶ, ವಿದೇಶಗಳ ಜನ ಗೋವಾದತ್ತ ಮುಖ ಮಾಡುವುದು ಸಾಮಾನ್ಯ. ಎಂದಿನಿAದ ನಡೆದು ಬಂದಿರುವ ರೂಢಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ವರ್ಷಾಂತ್ಯದಲ್ಲಿ ಗೋವಾಕ್ಕೆ ಕಾಲಿಡುವುದೇ ಕಷ್ಟ. ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ. ಹಾಗಾಗಿ ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರು ಗೋವಾ ಪಕ್ಕದ ಉತ್ತರ ಕನ್ನಡವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರೆಸಾರ್ಟ್, ಹೋಂ ಸ್ಟೇಗಳಲ್ಲಿ ಶಾಂತವಾಗಿ ಕುಳಿತ ಕಾಲ ಕಳೆಯಲು ಇದು ಉತ್ತಮ ಎಂಬುದು ಪ್ರವಾಸಿಗರ ಅನಿಸಿಕೆ.
ಪ್ರವಾಸಿ ಚಟುವಟಿಕೆಗಳಿಗೆ ಮಳೆ ಕೆಟ್ಟ ಹವಾಮಾನದ ಭಯ ಕಾಡಿದೆ. ಡಿಸೆಂಬರ್ 27 ರವರೆಗೆ ರಾಜ್ಯದ ಉತ್ತರ, ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅರಬ್ಬಿ ಸಮುದ್ರದಲ್ಲಿ ಪ್ರಕ್ಷÄಬ್ಧ ವಾತಾವರಣವಿರುವ ಕಾರಣ ಸ್ಕೂಬಾ ಡೈವಿಂಗ್‌ನAಥ ಸಮುದ್ರ ಆಧಾರಿತ ಜಲಸಾಹಸ ಚಟುವಟಿಕೆಗಳನ್ನು ನಡೆಸಲಾಗುತ್ತಿಲ್ಲ ಎಂದು ಪ್ರವಾಸೋದ್ಯಮಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಸಂಭವಿಸಿದ ಕೆಲವು ಅವಗಢಗಳು ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರುತ್ತಿವೆ.
ಪ್ರವಾಸೋದ್ಯಮಿ, ಗೋಕರ್ಣಮೋಹನ ನಾಯಕ ಕ್ರಿಸ್‌ಮಸ್ ನಿಮಿತ್ತ ಗೋಕರ್ಣದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ಈ ವಾರಾಂತ್ಯದವರೆಗೂ ಹೋಟೆಲ್ ರೆಸಾರ್ಟ್ಗಳ ಬುಕ್ಕಿಂಗ್ ಫುಲ್ ಆಗಿದೆ. ವರ್ಷಾಂತ್ಯ ಸೋಮವಾರ ಮತ್ತು ಮಂಗಳವಾರ ಬಂದಿದೆ. ಹಾಗಾಗಿ ಈ ತನಕ ಹೆಚ್ಚಿನ ಬುಕ್ಕಿಂಗ್ ಆಗಿಲ್ಲ. ಈ ವಾರವಿಡೀ ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.