

ಕೊಲ್ಲೂರು: ಸಿಗಂದೂರು ದೇವರ ದರ್ಶನ ಪಡೆದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆತರುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ ಮಂಗಳವಾರ ಕೊಲ್ಲೂರಿನ ಸಮೀಪ ದಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ.
ಘಟನೆಯಲ್ಲಿ ಬಸ್‌ನಲ್ಲಿದ್ದ 22 ಮಂದಿಯೂ ಗಾಯಗೊಂಡಿದ್ದು, ಈ ಪೈಕಿ ಶಂಕರಪ್ಪ(50), ರೂಪಾ(35), ಶ್ಯಾಮಲಮ್ಮ(42), ರತ್ನಮ್ಮ(52), ವೆಂಕಟರಮಣ(45), ಚಂದ್ರಕಲಾ(43), ಕಲಾವತಿ(40) ಎಂಬುವರಿಗೆ ಗಂಭಿರ ಗಾಯಗಳಾಗಿವೆ, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೂವರು ಮಹಿಳೆಯರ ಕೈ ತುಂಡಾಗಿದ್ದು, ಇಬ್ಬರ ತಲೆಗೆ ಗಂಭೀರ ಗಾಯಗಳಾಗಿದೆ. ಇನ್ನೊಬ್ಬರ ಪಕ್ಕೆಲಬು ಮುರಿದಿದೆ. ಪ್ರವಾಸಿಗರು ಕೋಲಾರದ ಮುಳುಬಾಗಿಲು ಮೂಲದವರೆಂದು ತಿಳಿದುಬಂದಿದೆ. ಉಳಿದ ಗಾಯಾಳುಗಳನ್ನು ಸ್ಥಳೀಯರು ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.