ಪ್ರವಾಸೋದ್ಯಮದ ವಿಡಿಯೋ ಮೇಕಿಂಗ್ ಆನ್‌ಲೈನ್ ಸ್ಪರ್ಧೆ: ಕುಷ್ಟಗಿ ತಾಲೂಕಿನ ಭರತ್ ಹಿರೇಮನಿಗೆ ದ್ವಿತೀಯ ಸ್ಥಾನ

090222 Bharath Hiremani Videograph 2nd place
ಭರತ್ ಸೆರೆಹಿಡಿದ ವಿಡಿಯೋದ ಚಿತ್ರ, ಭರತ್ ಹಿರೇಮನಿ, ಪ್ರಶಸ್ತಿ ಪತ್ರ
Published on

ಕುಷ್ಟಗಿ: ಆಜಾದಿ ಕಾ ಅಮೃತ ಮಹೋತ್ಸವ, ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ವಿಡಿಯೋ ಮೇಕಿಂಗ್ ಆನ್‌ಲೈನ್ ಸ್ಪರ್ಧೆಯಲ್ಲಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಮಾಜಿ ಸೈನಿಕ ಬುಡ್ಡಪ್ಪ ಹಿರೇಮನಿ ಅವರ ಪುತ್ರ ಭರತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜನವರಿಯಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಬೆಳಕಿಗೆ ಬಾರದೇ ಇರುವ ಗ್ರಾಮೀಣ ಸೊಬಗು, ಸೌಂದರ್ಯ ಕುರಿತ ವಿಡಿಯೋ ತಯಾರಿಸಿ ಆನ್‌ಲೈನ್ ಮುಖಾಂತರ ಕಳುಹಿಸುವಂತೆ ಪ್ರವಾಸೋದ್ಯಮ ಇಲಾಖೆ ಸೂಚಿಸಿತ್ತು. ಗಂಗಾವತಿ ತಾಲೂಕಿನ ಸಾಣಾಪುರ ಬಳಿ ಇರುವ ಕಣಿವೆ ಮಧ್ಯೆ ಹರಿಯುವ ನೀರು ಹಾಗೂ ನಿಸರ್ಗ ಸೌಂದರ್ಯ ಸೆರೆ ಹಿಡಿದು ಭರತ್ ಕಳುಹಿಸಿದ್ದರು. ಬೆಂಗಳೂರಿನ ಅರುಣ್ ಭಾರದ್ವಾಜ್ ಪ್ರಥಮ ಸ್ಥಾನ ಪಡೆದರೆ, ಭರತ್ ಹಿರೇಮನಿ ಎರಡನೇ ಸ್ಥಾನ ಪಡೆದಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net