ಪ್ರವಾಸಿಗರಿಗೆ ಅನುಕೂಲವಾಗಲು ಪುಸ್ತಕ ಸಿದ್ಧಪಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Dc Meeting
Published on
ಮಂಡ್ಯ: ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಪ್ರವಾಸಿ ತಾಣಗಳ ಮಾಹಿತಿವುಳ್ಳ ಗೈಡ್ ಪುಸ್ತಕವನ್ನು ಹೊರತರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರವಾಸೋದ್ಯಮ ನೀತಿ 2015-20 ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರವಾಸಿ ತಾಣದ ಪ್ರಾಮುಖ್ಯತೆವುಳ್ಳ ಫೋಸ್ಟರ್ ಹಾಗೂ ಹೆದ್ದಾರಿ ಫಲಕಗಳನ್ನು ಅನಾವರಣ ಮಾಡಬೇಕು. ಇಡೀ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಮ್ಯಾಪ್ ಮಾಡುವುದರಿಂದ ಪ್ರವಾಸಿ ತಾಣಗಳ ನಡುವೆ ಇರುವ ಅಂತರ ಹಾಗೂ ಸಂಚರಿಸಲು ಪ್ರವಾಸಿಗರಿಗೆ ಅನುಕೂಲವಾಗಲಿದೆ‌. ಇದಲ್ಲದೆ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ವೆಬ್ ಸೈಟ್ ಅವಶ್ಯಕತೆ ಇದೆ. ಪ್ರವಾಸೋದ್ಯಮದ ಮಾಹಿತಿ ಪ್ರತಿಯೊಬ್ಬರಿಗೆ ತಲುಪಲು ಆಕರ್ಷಣೀಯ ಹಾಗೂ ಮಾಹಿತಿಯೊಂದಿಗೆ ಉತ್ತಮ‌ ರೀತಿಯಲ್ಲಿ ರಚಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ  ರಂಗಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಶಿವಲಿಂಗಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net