ದೇಶದ ಪ್ರಗತಿಗೆ ಪ್ರವಾಸೋದ್ಯಮ ಪೂರಕ

27blrp5
Published on

ಬೇಲೂರು: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಪಟ್ಟಣದ ಹೋಟೆಲ್ ಮಯೂರ ವೇಲಾಪುರಿ ಆವರಣದಲ್ಲಿ ಶುಕ್ರವಾರ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಬೇಲೂರು-ಹಳೇಬೀಡು ಮಯೂರ ವೇಲಾಪುರಿ ಹೋಟೆಲ್ ವ್ಯವಸ್ಥಾಪಕ ಶ್ರೇಯಸ್ ಹಾಗೂ ಮಯೂರ ಯಗಚಿ ಹೊಟೇಲ್ ವ್ಯವಸ್ಥಾಪಕ ಪಾಪಣ್ಣ ಚಾಲನೆ ನೀಡಿದರು.


ಶ್ರೇಯಸ್ ಮಾತನಾಡಿ, ಪ್ರತಿ ವರ್ಷದಂತೆ ಸೆಪ್ಟೆಂಬರ್ 27 ರಂದು ಪ್ರವಾಸೋದ್ಯಮ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ಸಂಘಟನೆಯ ಅಧಿಕೃತ ಕಾರ್ಯಕ್ರಮಗಳೊಂದಿಗೆ ಹೋಟೆಲ್ ಮಯೂರ ವೇಲಾಪುರಿಯಲ್ಲಿ ಆಚರಿಸುತ್ತಿದ್ದೇವೆ ಎಂದರು.


ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆ ನೀಡುತ್ತದೆ. ಪ್ರವಾಸಿಗರ ಮತ್ತು ಸ್ಥಳೀಯರ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಪೋಷಿಸುತ್ತದೆ. ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಸಮುದಾಯದ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಹಕರಿಸುತ್ತದೆ ಎಂದರು.

ಮಯೂರ ಯಗಚಿ ಹೊಟೇಲ್ ವ್ಯವಸ್ಥಾಪಕ ಪಾಪಣ್ಣ ಮಾತ ನಾಡಿ, ವಿಶ್ವ ಪ್ರವಾಸೋದ್ಯಮದ ದಿನದ ಅಂಗವಾಗಿ ಕಾರ್ಯಕ್ರಮವನ್ನು ಬೈಕ್ ಜಾಥಾದ ಮೂಲಕ ಚನ್ನಕೇಶವ ದೇಗುಲ ಆವರಣದಿಂದ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ, ಪುರಾತನ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಬಾರತೀಯ ಪುರಾತತ್ವ ಇಲಾಖೆ, ಸ್ಥಳೀಯ ಪೊಲಿಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕರು, ಪ್ರವಾಸಿ ಮಿತ್ರರು ಹಾಗೂ ಸಿಬ್ಬಂದಿಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಇಂದ್ರಮ್ಮ, ಪ್ರವಾಸಿಗರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net