ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ

Mng_chauta
Published on

ಮಂಗಳೂರು: ಭಾರತದ ಪಶ್ಚಿಮ ಕರಾವಳಿಯ ಅದ್ಭುತ ತಾಣ ಮಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಗುರುವಾರ ಭೇಟಿಯಾಗಿ ಮನವಿ ಮಾಡಿದರು

ಸಸಿಹಿತ್ಲು ಬೀಚ್‌ನಲ್ಲಿ ಸಾಹಸ ಪ್ರವಾಸೋದ್ಯಮ ಪರಿಚಯಿಸಬೇಕು ಹಾಗೂ ಭಾರತದಲ್ಲಿ ಪ್ರಥಮ ವಿಶ್ವಮಟ್ಟದ ಪ್ಯಾಡ್ಲಿಂಗ್ ಸ್ಪರ್ಧೆ ಆಯೋಜನೆಗೊಂಡ ಸಸಿಹಿತ್ಲು ಬೀಚ್‌ಗೆ ಬ್ಲೂ ಫ್ಲಾೃಗ್ ಪ್ರಮಾಣೀಕರಣ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ‘ಯುವ ಪ್ರವಾಸೋದ್ಯಮ ಕ್ಲಬ್’ಗಳನ್ನು ಸ್ಥಾಪಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಪಶ್ಚಿಮಘಟ್ಟ, ಸುಂದರ ಕಡಲತೀರ, ಹೆಸರಾಂತ ಧಾರ್ಮಿಕ ಕೇಂದ್ರಗಳು, ವರ್ಷದ ಉದ್ದಕ್ಕೂ ನಾನಾ ರೀತಿಯ ಆಚರಣೆಗಳು, ಐತಿಹಾಸಿಕ ಪ್ರಾಮುಖ್ಯ ಹೊಂದಿರುವ ತಾಣಗಳು... ಹೀಗೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ದ.ಕ. ಜಿಲ್ಲೆಯು ಪ್ರಮುಖ ಪ್ರವಾಸಿತಾಣವಾಗಿ ಪರಿವರ್ತನೆಗೊಳ್ಳುವ ಎಲ್ಲ ಸಾಮರ್ಥ್ಯ ಹೊಂದಿದೆ. ಇದನ್ನು ಸಾಧಿಸಲು ಸಚಿವರ ಬೆಂಬಲ ಯಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net