Tourism Department ಉಪ ನಿರ್ದೇಶಕರಿಂದ 1 ಲೈಫ್‌ ಗಾರ್ಡ್‌ ಮೇಲೆ ಹಲ್ಲೆಆರೋಪ

Tourism Department
Published on

ಕಾರವಾರ: ತಮ್ಮ ಮೇಲೆ ಪ್ರವಾಸೋದ್ಯಮ ಇಲಾಖೆ( Tourism Department)  ಉಪ ನಿರ್ದೇಶಕರು ಹಲ್ಲೆ ನಡೆಸಿದ್ದಾರೆ ಎಂದು ಹೊನ್ನಾವರ ಇಕೋ ಬೀಚ್‌ನ ಜೀವ ರಕ್ಷಕ ಸಿಬ್ಬಂದಿ ಯೋಗೇಶ ಅಂಬಿಗ ಆರೋಪಿಸಿದ್ದಾರೆ.

ಭಾನುವಾರ ಘಟನೆ ನಡೆದಿದ್ದು, ಅದನ್ನು ಖಂಡಿಸಿ, ಜಿಲ್ಲೆಯ ಗೋಕರ್ಣ, ಮರ್ಡೇಶ್ವರ ಹಾಗೂ ಹೊನ್ನಾವರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ  ಲೈಫ್ ಗಾರ್ಡ್ಗಳು ಸೋಮವಾರ ತಮ್ಮ ಕರ್ತವ್ಯದಿಂದ ದೂರ ಇದ್ದು, ಕಾರವಾರಕ್ಕೆ ಬಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ದೂರು ನೀಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ವಿ.ಜಯಂತ್ ವಿರುದ್ಧ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

Tourism Department ನಿಂದ  ಸೌಲಭ್ಯ ಒದಗಿಸಿ:

ಜೀವ ರಕ್ಷಕ ಸಿಬ್ಬಂದಿಗೆ ರಕ್ಷಣೆ ಇಲ್ಲವಾಗಿದೆ. ವಿಮಾ ಸೌಲಭ್ಯವಿಲ್ಲ. ಸಮವಸ್ತç ನೀಡಿಲ್ಲ. ಸ್ಪೀಡ್ ಬೋಟ್, ಬೋಯ್ ಮುಂತಾದ ಜೀವ ರಕ್ಷಕ ಸಾಮಗ್ರಿಗಳನ್ನು ನೀಡಿಲ್ಲ. ಮಾಸಿಕವಾಗಿ ವೇತನ ಪಾವತಿಯಾಗುತ್ತಿಲ್ಲ. ಎರಡುವರೆ ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತದೆ. ಪಿಎಫ್, ಇಎಸ್‌ಐ ಸೌಲಭ್ಯವಿಲ್ಲ ಎಂದು ಜೀವ ರಕ್ಷಕ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ಬಗ್ಗೆ ವಿಚಾರಿಸಿದರು. ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಘಟನೆ ನಡೆಯುವ ಸಂದರ್ಭದಲ್ಲಿ ಇದ್ದ ಇಕೋ ಬೀಚ್‌ನ ಮೇಲ್ವಿಚಾರಕರನ್ನು ಕರೆಸಿ, ವಿಚಾರಣೆ ಕೈಗೊಂಡು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net