

ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ, ಭಾರತೀಯ ಪ್ರವಾಸೋದ್ಯಮ ವಲಯ ಕಚೇರಿ ಆಶ್ರಯದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪಿ.ಜಿ.ಟ್ರಾವೆಲ್ ಆ್ಯಂಡ್ ಟೂರಿಸಂ ಮ್ಯಾನೇಜ್‌ಮೆಂಟ್ ವಿಭಾಗದ ನೇತೃತ್ವದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಜಿಲ್ಲಾಮಟ್ಟದ ಪ್ರವಾಸೋದ್ಯಮ ದಿನಾಚರಣೆ ಶನಿವಾರ ಮುಕ್ತಾಯಗೊಂಡಿತು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಆಯೋಜಿಸಲಾದ ‘ಮೆರಾಕಿ-2’ ಕಾರ್ಯಕ್ರಮದ ಸಮಾರೋಪ ಅಧಿವೇಶನವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಮುಹಮ್ಮದ್ ಅಲಿ ಕೆ. ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕಿ ಡಾ.ಸಿಂಧು ಜೋಸೆಫ್, ಕಾಲೇಜು ಹೆಚ್ಚುವರಿ ಮಾಜಿ ನಿರ್ದೇಶಕಿ ಡಾ.ಜ್ಯೋತಿರಾಜ್, ಉಪ ಪ್ರಾಂಶುಪಾಲ ಡಾ.ಸಚೀಂದ್ರನ್ ವಿ., ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ, ಡಿಟಿಪಿಸಿ ಕಾರ್ಯದರ್ಶಿ ಜಿಜೇಶ್ ಕುಮಾರ್ ಜೆ.ಕೆ., ಎಬಿನ್ ಕೆ.ಐ. ಮತ್ತಿತರರಿದ್ದರು.
ಬಿಆರ್‌ಡಿಸಿ ಎಂಡಿ ಶಿಜಿನ್ ಪರಂಬತ್ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿದ್ದರು. ಮಂಜೇಶ್ವರ ಬೀಚ್‌ನಲ್ಲಿ ಬೀಚ್ ಶುಚಿಗೊಳಿಸುವ ಅಭಿಯಾನ ನಡೆಯಿತು.