ತೀರದಲ್ಲಿ ಬಿದ್ದ ಮೊಬೈಲ್ ಹಿಂತಿರುಗಿಸಿದ ಸಿಬ್ಬಂದಿ

Mobile returned
Published on

ಕಾರವಾರ: ಟ್ಯಾಗೋರ್ ಕಡಲ ತೀರದಲ್ಲಿ ವ್ಯಕ್ತಿಯೊಬ್ಬ ಕಳೆದುಕೊಂಡಿದ್ದ ಸುಮಾರು 15 ಸಾವಿರ ರೂ. ಮೌಲ್ಯದ ಮೊಬೈಲ್‌ನ್ನು ಪ್ರವಾಸೋದ್ಯಮ ಇಲಾಖೆಯಿಂದ ನೇಮಕವಾದ ಪ್ರವಾಸಿ ಮಿತ್ರ ರಾಘವೇಂದ್ರ ನಾಯ್ಕ ಹಾಗೂ ಲೈಫ್ ಗಾರ್ಡ್ ಪ್ರಶಾಂತ ಅಂಬಿಗ ಅವರು ಮಾಲೀಕರಿಗೆ ಮರಳಿಸಿ ಪ್ರಮಾಣಿಕತೆ ಮೆರೆದರು.

ಬೈತಖೋಲ್ ಐಒಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಇಂದ್ರಜಿತ್ ಅವರಿಗೆ ಮೊಬೈಲ್ ಸೇರಿದ್ದು, ಎಂಬುದು ಗೊತ್ತಾಗಿ ಅವರಿಗೆ ಮರಳಿಸಿದರು. ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net