ಪ್ರವಾಸಿ ಸ್ಥಳ ವೀಕ್ಷಣೆಗೆ ಟೂರ್ ಪ್ಯಾಕೇಜ್

Tourists visiting Mysore Palace
Published on

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ಯಾಕೇಜ್ ಟೂರ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಅ.15 ರವರೆಗೂ ಇರಲಿದೆ.


ಗಿರಿ ದರ್ಶಿನಿ ಪ್ಯಾಕೇಜ್ ಟೂರ್: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟವನ್ನು ವೀಕ್ಷಿಸಬಹುದಾಗಿದ್ದು, ವಯಸ್ಕರಿಗೆ 400 ರೂ., ಮಕ್ಕಳಿಗೆ 250 ರೂ.,ಪ್ರಯಾಣ ದರವಾಗಿರುತ್ತದೆ.


ಜಲ ದರ್ಶಿನಿ ಪ್ಯಾಕೇಜ್ ಟೂರ್: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಸೀಟ್, ಹಾರಂಗಿ ಜಲಾಶಯ ಹಾಗೂ ಕೆ.ಆರ್.ಎಸ್ ವೀಕ್ಷಿಸಬಹುದಾಗಿದ್ದು, ವಯಸ್ಕರಿಗೆ 450 ರೂ., ಮಕ್ಕಳಿಗೆ 300 ರೂ. ಪ್ರಯಾಣ ದರವಾಗಿರುತ್ತದೆ.


ದೇವ ದರ್ಶಿನಿ ಪ್ಯಾಕೇಜ್ ಟೂರ್: ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಹಾಗೂ ಕೆಆರ್‌ಎಸ್ ವೀಕ್ಷಿಸಬಹುದಾಗಿದ್ದು, ವಯಸ್ಕರಿಗೆ 300 ರೂ., ಮಕ್ಕಳಿಗೆ 200 ರೂ.ಪ್ರಯಾಣ ದರವಾಗಿರುತ್ತದೆ.


ಪ್ಯಾಕೇಜ್ ಟೂರ್‌ಗಳಿಗೆ ಪ್ರವಾಸಿಗರು ನಿಗಮದ ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಖಾಸಗಿ ಅವತಾರ್ ಬುಕಿಂಗ್ ಕೌಂಟರ್ ಹಾಗೂ www.ksrtc.karnataka.gov.in ಮೂಲಕ ಮುಂಗಡ ಆಸನವನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net