ಸಹಕಾರ ಸಂಘದ ರೈತರ ಅಧ್ಯಯನ ಪ್ರವಾಸ

tour
Published on

ಕುಶಾಲನಗರ:

ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾರ್ಗದರ್ಶನದಲ್ಲಿ ಈ ವ್ಯಾಪ್ತಿಯ ನೂರು ರೈತರ ಆಧ್ಯಯನ ಪ್ರವಾಸ ಬೆಂಗಳೂರಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ತೆರಳಿ ತೋಟಗಾರಿಕೆಗೆ ಸಂಬAಧಿಸಿದAತೆ ಮೇಳದಲ್ಲಿದ್ದ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಬೃಹತ್ ರಾಷ್ಟ್ರೀಯ ತೋಟಗಾರಿಕಾ ಮಹಾ ಮೇಳದಲ್ಲಿ ರಾಷ್ಟ್ರೀಯ, ಮತ್ತು ಅಂತರಾಷ್ಟ್ರೀಯ ಮಟ್ಟದ ತೋಟಗಾರಿಕೆಗೆ ಸಂಬAಧಿಸಿದ ನೂರಾರು ಬಗೆಯ ಫಲಪುಷ್ಪಗಳ ಪ್ರದರ್ಶನ, ವಿವಿಧ ಬಗೆಯ ತರಕಾರಿ, ಹೈಬ್ರೀಡ್ ತಳಿಯ ಹಣ್ಣುಗಳ ಗಿಡಗಳ ವೀಕ್ಷಣೆ, ಹೈಬ್ರೀಡ್ ತಳಿಯ ವಿವಿಧ ಬಗೆಯ ತೋಟಗಾರಿಕಾ ಬೆಳೆ, ಅದಕ್ಕೆ ಸಂಬAಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಅಲ್ಲಿನ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದದ ಮೂಲಕ ರೈತರು ತಿಳಿದುಕೊಂಡರು.

ಕಡಿಮೆ ಭೂಮಿಯಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದರ ಮೂಲಕ ಅಧಿಕ ಬೆಳೆಯನ್ನು ಬೆಳೆಯುವ ಅಧುನಿಕ ತಂತ್ರಜ್ಞಾನ ವ್ಯವಸ್ಥೆ ಅಡಿಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿವಿಧ ಬಗೆಯ ತೋಟಗಾರಿಕಾ ವಿಷಯಗಳ ಬಗ್ಗೆ ಕೇಂದ್ರದ ತೋಟಗಾರಿಕಾ ಸಂಸ್ಥೆಯ ಅಧಿಕಾರಿಗಳು ಸಹಕಾರ ಸಂಘದ ರೈತರಿಗೆ ಮಾಹಿತಿ ಒದಗಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಸ್. ಕೃಷ್ಣ, ರಾಮಚಂದ್ರ, ನಾಗರಾಜು, ಜಯಶ್ರೀ, ರಮೇಶ್ ಸೇರಿದಂತೆ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net