

ಕುಶಾಲನಗರ:
ಜಿಲ್ಲಾ ಪಂಚಾಯತ್ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ, ಪಶು ವೈದ್ಯಕೀಯ ಆಸ್ಪತ್ರೆ ಕುಶಾಲನಗರ ಇವರ ವತಿಯಿಂದ 2024-25 ನೇ ಸಾಲಿನ ವಿಸ್ತರಣಾ ಘಟಕ ಬಲಪಡಿಸುವಿಕೆ ಯೋಜನಾ ಕಾರ್ಯಕ್ರಮದ ಅಡಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಂಬAಧಿಸಿದAತೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು.
ಕುರಿ ಮತ್ತು ಮೇಕೆ ಸಾಕಾಣಿಕೆ ಸಂದರ್ಭ ಅನುಸರಿಸುವ ನೂತನ ವಿಧಾನ, ಹೊಸ ಹೊಸ ತಳಿಗಳ ಬಗ್ಗೆ ರೈತರಿಗೆ ತಿಳುವಳಿಕೆ, ನೂತನ ಕುರಿ ಸಾಕಾಣಿಕೆಯಿಂದ ರೈತರು ಕಡಿಮೆ ಖರ್ಚಿನಿಂದ ಹೆಚ್ಚು ಆದಾಯಗಳಿಸುವ ಮತ್ತು ದೇಶೀಯ, ವಿದೇಶಿ ತಳಿಗಳ ಸಾಕಾಣಿಕೆಯಲ್ಲಿ ಲಾಭವನ್ನು ಗಳಿಸುವ ಬಗ್ಗೆ ಮಂಡ್ಯ ಜಿಲ್ಲೆಯ ನಾಗಮಂಗಲ ಮೇಕೆ ಸಾಕಾಣಿಕೆ ಘಟಕದ ಕೇಂದ್ರಕ್ಕೆ ಭೇಟಿ ನೀಡಿ ರೈತರು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ನಿಯಮಿತದ ಜಿಲ್ಲಾ ಅಧ್ಯಕ್ಷ ಡಿ.ಆರ್. ಪ್ರಭಾಕರ್, ನಿರ್ದೇಶಕರಾದ ಚಿಕ್ಕಯ್ಯ, ಜಗದೀಶ್, ಮಹದೇವ, ಕುಶಾಲನಗರ ಪಶುವೈದ್ಯ ಡಾ. ಸಿಂಧೆ, ರೈತÀ ಮುಖಂಡ ಮಲ್ಲೇಶ್, ಲೋಕೇಶ್, ಕುಮಾರ, ಶಂಕರಪ್ಪ, ರಮೇಶ್ ಮತ್ತಿತರರು ಇದ್ದರು.