ಮತದಾನದ ದಿನ ಪ್ರವಾಸಿತಾಣಗಳು ಬಂದ್

13sun01
Published on

ಕುಶಾಲನಗರ:

ಮತದಾನದ ದಿನ ಹೇಗೂ ರಜೆ ಇದೆ, ಕೊಡಗಿಗೆ ಒಂದು ಟ್ರಿಪ್ ಹೋಗಿ ಬರೋಣ ಎಂದು ಹೊರಟು ಬಿಡಬೇಡಿ. ಅರಣ್ಯ ಇಲಾಖೆ ನಿರ್ವಹಣೆಗೆ ಒಳಪಡುವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಈ ತಿಂಗಳ ೧೦ರಂದು ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಮತದಾನ ದಿನದ ರಜೆ ಬಳಸಿಕೊಂಡು ಬಹಳಷ್ಟು ಮಂದಿ ಪ್ರವಾಸ ಹೊರಡುವುದರಿಂದ ಮತದಾನದ ಪ್ರಮಾಣ ಕಡಿಮೆ ಆಗುತ್ತದೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊಡಗು ರಕ್ಷಣಾ ವೇದಿಕೆ, ಕರ್ನಾಟಕ ಕಾವಲು ಪಡೆ ಮತ್ತಿತರ ಸಂಘಟನೆಗಳು ಮತದಾನದ ದಿನ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದವು. ಈ ಬೆನ್ನಲ್ಲೇ ಕುಶಾಲನಗರದ ಕಾವೇರಿ ನಿಸರ್ಗಧಾಮ, ಹಾರಂಗಿಯ ಆನೆ ಕ್ಯಾಂಪ್ ಹಾಗೂ ದುಬಾರೆ ಆನೆ ಕ್ಯಾಂಪ್‌ಗೆ ಮೇ ೧೦ರಂದು ಪ್ರವಾಸಿಗರನ್ನು ಬಿಡುವುದಿಲ್ಲ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಮತ್ತೊಂದು ಕಡೆ ಮತದಾನ ಪ್ರಮಾಣ ಹೆಚ್ಚಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಕೆಲವೊಂದು ಹೊಟೇಲ್‌ಗಳು ರಿಯಾಯಿತಿ ಪ್ರಕಟಿಸಿವೆ. ಮತದಾನ ಮಾಡಿ ಕೊಡಗಿಗೆ ಪ್ರವಾಸ ಬಂದರೆ ತಮ್ಮಲ್ಲಿ ಶೇ.೧೦ರ ರಿಯಾಯಿ ಕೊಡುವುದಾಗಿ ಘೋಷಣೆ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net