ಸ್ಪರ್ಶಜ್ಞಾನವಿಲ್ಲದ ಮಚ್ಚೆ ಇದ್ದರೆ ತಪಾಸಿಸಿಕೊಳ್ಳಿ

31 TVG (1)
ತಾವರಗೇರಾದ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡೆಂೆ ವಿರೋಧಿ ಮಾಸಾಚರಣೆಯಲ್ಲಿ ಉಪನ್ಯಾಸಕ ತಮ್ಮಣ್ಣ ಮಾತನಾಡಿದರು. ಪ್ರಮುಖರಾದ ರೇಣುಕಾ ಪಾಟೀಲ, ಶಂಕ್ರಮ್ಮ, ಜಗ್ಗಲ, ಅಮರಮ್ಮ ಇದ್ದರು.
Published on

ತಾವರಗೇರಾ: ಮನೆ ಸುತ್ತ ಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆ ಕಡಿತದಿಂದ ಪಾರಾಗಬೇಕು ಎಂದು ಹಿರಿಯ ಆರೋಗ್ಯ ಮೇಲ್ವಿಚಾರಕಿ ಶಂಕ್ರಮ್ಮ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಡೆಂೆ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೊಳ್ಳೆಯಿಂದ ಹರಡುವ ರೋಗಗಳ ಬಗ್ಗೆ ಜಾಗ್ರತೆ ವಹಿಸಬೇಕು. ಹಗಲಿನಲ್ಲಿ ಕಚ್ಚುವ ಸೊಳ್ಳೆಗಳಿಂದ ಮಾರಕ ಡೆಂೆ ಕಾಯಿಲೆ ಬರುತ್ತಿದ್ದು, ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸಂಗ್ರಹಗಾರಗಳನ್ನು ಆಗಾಗ ತೊಳೆದು ಒಣಗಿದ ನಂತರ ನೀರು ತುಂಬಿ ಮುಚ್ಚಳದಿಂದ ಮುಚ್ಚಿಡಬೇಕು ಎಂದು ತಿಳಿಸಿದರು.

ಆ.14ರವರೆಗೆ ಎಲ್‌ಸಿಡಿಸಿ ಕಾರ್ಯಕ್ರಮ ನಡೆಯಲಿದ್ದು, ಮೈಮೇಲೆ ಯಾವುದಾದರು ತಿಳಿ ಬಿಳಿ ತಾಮ್ರ ವರ್ಣದ ಹಾಗೂ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಬೇಕು ಹಾಗೂ 14 ದಿನ ನಡೆಯುವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎಚ್.ಡಿ. ಜಗ್ಗಲ್, ಉಪನ್ಯಾಸಕರಾದ ಬಿ.ಎನ್. ಪಾಟೀಲ, ತಮ್ಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಿತಾಧಿಕಾರಿ ರೇಣುಕಾ, ಆಶಾ ಕಾರ್ಯಕರ್ತೆ ಅಮರಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net