ಆಮೆ ಸಾಗಣೆ, ಓರ್ವನ ಬಂಧನ

24 Jaggu 11-Web
ಆರೋಪಿಯಿಂದ ವಶಪಡಿಸಿಕೊಂಡ ಎರಡು ಜೀವಂತ ಆಮೆ.
Published on

ಬೆಳಗಾವಿ: ಎರಡು ಜೀವಂತ ಆಮೆಗಳನ್ನು ಮಹಾರಾಷ್ಟ್ರಕ್ಕೆ ಸಾಗಿಸಲು ಹೊಂಚು ಹಾಕಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಟ್ಟಣಬಾವಿ ಗ್ರಾಮದ ಅರ್ಜುನ ಕಲ್ಲಪ್ಪ ನಾಯಿಕ (45) ಬಂಧಿತ ವ್ಯಕ್ತಿ.

ಯಾವುದೋ ಅರಣ್ಯ ಪ್ರದೇಶದಿಂದ ಎರಡು ಆಮೆಗಳನ್ನು ತಂದು ತನ್ನ ಮನೆಯ ನೀರಿನ ಟ್ಯಾಂಕ್‌ನಲ್ಲಿ ಕೂಡಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಗ್ರಾಮದ ಪಂಚರ ಸಮಕ್ಷಮದಲ್ಲಿ 2.1 ಕೆ.ಜಿ. ಹಾಗೂ 1.6 ಕೆ.ಜಿ. ತೂಕದ ಎರಡು ಆಮೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿರುದ್ಧ ಕಲಂ 9, 39, 44, 49 (ಎ.ಬಿ.ಸಿ) 50, 51 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ನೇ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net