

ನಾಯ್ಕಲ್ : ಖಾನಾಪುರ 110 ಕೆವಿ ಸ್ಟೇಶನ್ನಿಂದ ಪೂರೈಕೆಯಾಗುವ ವಿದ್ಯುತ್ನ್ನು ಮಳೆಯಿಂದ ಖಾನಾಪುರ ಸುತ್ತಲಿನ ಅನೇಕ ಗ್ರಾಮಗಳು ವಿದ್ಯುತ್ ಪೂರೈಕೆ ಕೈ ಕೊಟ್ಟಿದ್ದರಿಂದ ರಾತ್ರಿ ಹೊತ್ತು ಕತ್ತಲ್ಲಿಯೇ ಕಾಲ ಕಳೆಯುವಂತಾಯಿತು.
ಇದನ್ನರಿದ ಜೆಸ್ಕಾಂನ ಶಹಾಪುರ ಉಪ ವಿಭಾಗದ, ವಡಗೇರಾ ಸೆಕ್ಷನ್ ಕಚೇರಿ ಜೆಇ ಆನಂದ ಕೋಲ್ಕರ್ ಹಾಗೂ ಸಿಬ್ಬಂದಿ ಮಧ್ಯರಾತ್ರಿಯೇ ಕಾರ್ಯಪ್ರವೃತ್ತರಾಗಿ ಮಳೆಯಲ್ಲಿಯೇ ಸಮಸ್ಯೆ ಸರಿಪಡಿಸುವ ಕಾರ್ಯ ಮಾಡಿದ್ದಾರೆ.
ಕರೊನಾ ವೈರಸ್ನ ನಡುವೇ ಸೇನಾನಿಗಳ ತರಹ ಜೆಸ್ಕಾಂ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಖಾನಾಪುರ, ನಾಯ್ಕಲ್, ಮನಗನಾಳ, ಗುಲಸರಂ, ಬಲಕಲ್ ಗ್ರಾಮಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಜೆಇ ಆನಂದ ಕುಮಾರ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಮಸ್ಯೆ ಪರಿಹರಿಸಿದ್ದಾರೆ.
ಕಲಬುರಗಿ ಜೆಸ್ಕಾಂನ ಎಂಡಿ, ಯಾದಗಿರಿ ಇಇ ಅಧಿಕಾರಿಗಳು ಅವರು ಇಂತವರನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಾಯ್ಕಲ್ ಗ್ರಾಮದ ಪಂನ ಮಾಜಿ ಅಧ್ಯಕ್ಷ ಖಾಜಾ ಮೈನೋದ್ದೀನ್ ಜೇಮಶೇರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.