ಗುಡುಗು ಸಹಿತ ಧಾರಾಕಾರ ಮಳೆ

rain
ಕಡಬ ತಾಲೂಕಿನಾದ್ಯಂತ ಬುಧವಾರ ಸಾಯಂಕಾಲ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ
Published on

ಕಡಬ: ಕಡಬ ತಾಲೂಕಿನಾದ್ಯಂತ ಬುಧವಾರ ಸಾಯಂಕಾಲ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಪೇಟೆಯಲ್ಲಿ ಹೆದ್ದಾರಿ ಪಕ್ಕದ ಚರಂಡಿ ಬ್ಲಾಕ್ ಆಗಿ ಮಳೆ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ಹರಿದು ವಾಹನ ಸಂಚಾರಕ್ಕೆ ತೊಡಕಾಯಿತು.

ಕಡಬ ಸಮುದಾಯ ಆಸ್ಪತ್ರೆ ಸಿಬ್ಬಂದಿಯ ಕ್ವಾಟ್ರಸ್ ಬಳಿಯ ಚರಂಡಿ ಉಕ್ಕಿ ಹರಿದು ಕೆಲವು ಕ್ವಾಟ್ರಸ್ ಒಳಗಡೆ ನೀರು ನುಗ್ಗಿದೆ. ಕಡಬ ಕಾಲೇಜು ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದು ಕೆಲಕಾಲ ಸಂಚಾರ ಬಂದ್ ಆಯಿತು. ಸುಮಾರು ಅರ್ದ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದಲ್ಲೂ ಅಲ್ಲಲ್ಲಿ ಕೃಷಿ ತೋಟದ ಪಕ್ಕದ ತೋಡುಗಳು ಉಕ್ಕಿ ಹರಿದು ಕೃಷಿ ಪ್ರದೇಶಗಳಿಗೆ ನೀರು ನುಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net