ಧಾರಾಕಾರ ಮಳೆ: ಬುಡಸಮೇತ ನೆಲಕ್ಕುರುಳಿದ ಅಡಕೆ ಮರಗಳು

21 sgr4
ಸಾಗರ ತಾಲೂಕಿನ ಯಡಜಿಗಳ ಮನೆ ಗ್ರಾಪಂ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಅಡಕೆ ತೋಟದಲ್ಲಿ ನೆಲಕ್ಕುರುಳಿರುವ ಮರಗಳು.
Published on

ಸಾಗರ: ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ವ್ಯಾಪಕ ಮಳೆ ಆಗುತ್ತಿದ್ದು, ಗುರುವಾರ ಹಲವೆಡೆ ಮಳೆಯಿಂದಾಗಿ ಅನಾಹುತ ಸಂಭವಿಸಿದೆ.

ಯಡಜಿಗಳ ಮನೆ ಗ್ರಾಪಂ ವ್ಯಾಪ್ತಿಯ ಪರಶುರಾಮ್ ಎಂಬುವರ ತೋಟದಲ್ಲಿ ಅಡಕೆ ಮರಗಳು ಬುಡ ಸಮೇತ ನೆಲಕ್ಕುರುಳಿವೆ. ಜೋಗ್‌ನ ಕೃಷ್ಣಮೂರ್ತಿ ಎಂಬುವರ ಮನೆಯ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ತಾಲೂಕಿನ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಶುಕ್ರವಾರ ಮಳೆ ಕೊಂಚ ಬಿಡುವು ಕೊಟ್ಟಿದ್ದು, ಆಗ್ಗಾಗ್ಗೆ ಚದುರಿದಂತೆ ವರ್ಷಧಾರೆ ಆಗುತ್ತಿತ್ತು.
ತಾಲೂಕು ಆಡಳಿತ ಎರಡು ತಿಂಗಳಿನಿಂದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುತ್ತಿದ್ದು, ಮಳೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ಒದಗಿಸುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net