ಬಾಳೆಹೊನ್ನೂರು ಸುತ್ತ ಧಾರಾಕಾರ ಮಳೆ

02bhr 5 (1)
ಧಾರಾಕಾರ ಮಳೆಯಿಂದಾಗಿ ಬಾಳೆಹೊನ್ನೂರಿನ ಮಾರಿಗುಡಿ ರಸ್ತೆಯಲ್ಲಿ ಹಳ್ಳದಂತೆ ನೀರು ನಿಂತಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. 3 ಗಂಟೆಯ ವೇಳೆಗೆ ಗುಡುಗು ಸಹಿತ ಆರಂಭವಾದ ಮಳೆ ಒಂದು ತಾಸು ಧಾರಾಕಾರವಾಗಿ ಸುರಿದಿದೆ. ಭಾನುವಾರದಿಂದ ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಲಿದೆ ಎಂಬ ವರದಿಯಂತೆಯೇ ಭಾನುವಾರ ಸುರಿದಿರುವ ಮಳೆ ರೈತಾಪಿ ವರ್ಗಕ್ಕೆ ಹರ್ಷವನ್ನು ತಂದಿದೆ. ಪಟ್ಟಣದ ವಿವಿಧೆಡೆ ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದ್ದು ಪೈಪ್‌ಲೈನ್ ಅಳವಡಿಕೆಗಾಗಿ ಗುಂಡಿ ತೆಗೆಯಲಾಗಿದ್ದು, ರಸ್ತೆಗಳು ಕೊಳಚೆ ಗುಂಡಿಗಳಂತಾಗಿವೆ. ಭಾನುವಾರ ಸಂತೆಯ ದಿನವಾಗಿದ್ದು, ಮಳೆಯಿಂದಾಗಿ ವ್ಯಾಪಾರಸ್ಥರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net