

ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಭಾರತ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಶಾಲನಗರ ತೇಜಸ್ವಿನಿ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾಳೆ.
ಈಕೆ ಕುಶಾಲನಗರದ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಆನಂದ ಮತ್ತು ಸುಜಾತಾ ಅವರ ಪುತ್ರಿ.
ಉತ್ತಮ ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದ ಟಾಪರ್ ಆಗಿರುವ ಈಕೆ ಸಿಎ ಮಾಡುವ ಉದ್ದೇಶ ಹೊಂದಿದ್ದಾಳೆ.
ರ‌್ಯಾಂಕ್ ಪಡೆಯಲು ಪ್ರಾಂಶುಪಾಲರು, ತಂದೆ ತಾಯಿಯ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕಾರಣವಾಗಿದೆ. ಎಂದು ತಿಳಿಸಿದ್ದಾರೆ