ಸಾಮರಸ್ಯದ ಪ್ರತೀಕ ಟೋಪ ಜಾತ್ರೆ

jaatre
Published on

ಮುಳಗುಂದ: ಧರ್ಮ ಧರ್ಮಗಳನ್ನು ಬೆಸೆಯುವ ಕೆಲಸವನ್ನ ಸಂವಿಧಾನ, ಕಾನೂನಿನ ಮೂಲಕ ನಡೆಯುತ್ತದೆ. ಆದರೆ, ಮುಳಗುಂದದಲ್ಲಿ ಟೋಪ ಜಾತ್ರೆ ಮೂಲಕ ಧರ್ಮ ಸಮನ್ವಯತೆ ನಡೆದಿದೆ. ಇದರಿಂದ ಸಮಾಜದಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಇಲ್ಲಿನ ಎಸ್.ಜೆ.ಜೆ.ಎಂ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ನಡೆದ ಗ್ರಾಮದೇವತೆಯ ಟೋಪ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘12 ವರ್ಷಕ್ಕೊಮ್ಮೆ ಗ್ರಾಮದೇವತೆಯ ಟೋಪ ಜಾತ್ರೆಯು ಮನಸು- ಮನಸುಗಳನ್ನು ಬೆಸೆಯುವ, ಪ್ರೀತಿ, ವಿಶ್ವಾಸ ಗಟ್ಟಿಗೊಳಿಸುವ ಮಹೋತ್ಸವವಾಗಿದೆ. ಪರಸ್ಪರ ಪ್ರೀತಿ ವಿಶ್ವಾಸದ ಜತೆಗೆ ನಾವು ಶಾಂತಿಯನ್ನು ಕಾಪಾಡಿದರೆ, ಮನಸು ಶಾಂತವಾಗಿರುತ್ತದೆ, ಸಮಾಜವು ಶಾಂತಗಿರುತ್ತದೆ. ಧಾರ್ಮಿಕ ಆಚರಣೆ ಮೂಲಕ ದೇವಿ ಮಹಿಮೆ ತಿಳಿಯಲು ಬಹಳ ಅನುಕೂಲವಾಗುತ್ತದೆ. ಸೌಹಾರ್ದತೆಯಿಂದ ಟೋಪ ಜಾತ್ರೆ ಮಹೋತ್ಸವದ ಯಶಸ್ವಿಯಾಗಿದೆ’ ಎಂದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾನು ಇಲ್ಲಿನ ಗವಿಮಠಕ್ಕೆ ಬಂದ ನಂತರ ನಾಲ್ಕು ಟೋಪ ಜಾತ್ರೆಗಳನ್ನ ಕಂಡಿದ್ದೇನೆ, ಆದರೆ, ಹಿಂದಿಗಿಂತ ಈ ಟೋಪ ಜಾತ್ರೆಯ ವೈಭವ, ಅರ್ಥಪೂರ್ಣವಾಗಿ ನಡೆದಿದೆ ಎಂದು ಶ್ಲಾಘಿಸಿದರು.

ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತ ಪಂ. ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಮಾತನಾಡಿದರು. ಗ್ರಾಮದೇವತೆಯ ನೂತನ ಮೂರ್ತಿಗಳ ದಾನಿಗಳಾದ ಎನ್.ಆರ್. ದೇಶಪಾಂಡೆ ದಂಪತಿಗೆ ಹಾಗೂ ನಾಗಲಿಂಗಪ್ಪ ಬಡಿಗೇರ ದಂಪತಿಯನ್ನು ಸನ್ಮಾನಿಸಲಾಯಿತು.

ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು, ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಿವಣ್ಣ ನೀಲಗುಂದ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಕವಲೂರ, ಟ್ರಸ್ಟ್ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ, ಡಾ. ಎಸ್.ಸಿ. ಚವಡಿ, ಬಸವರಾಜ ಸುಂಕಾಪುರ, ದೇವಪ್ಪ ಹೊರಪೇಟಿ, ಹಸನಸಾಬ ಶೇಖ, ಮಂಜನಾಥ ಮಜ್ಜಿಗುಡ್ಡ, ವಿಜಯ ನೀಲಗುಂದ, ಪರಸಣ್ಣ ಸಂಗನಪೇಟಿ, ಬಸವರಾಜ ಬಾತಾಖಾನಿ, ಮಹಾಂತಪ್ಪ ನೀಲಗುಂದ, ಬಸವಂತಪ್ಪ ಮಟ್ಟಿ, ನಾಗರಾಜ ಬಾರಕೇರ, ಹೊನ್ನೇಶ ಜೋಗಿ, ಜಾತ್ರಾ ಸಮಿತಿ ಸದಸ್ಯರು, ಭಕ್ತರು ಇದ್ದರು. ಇದೇವೇಳೆ ಐಪಿಎಲ್ ಅಂತಿಮ ಪಂದ್ಯಾವಳಿಯಲ್ಲಿ ಆರ್.ಸಿ.ಬಿ ತಂಡ ಜಯಗಳಿಸಿದ ಹಿನ್ನೆಲೆ ಅಭಿಮಾನಿಗಳು ವೇದಿಕೆ ಮೇಲೆ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net