ಎತ್ತಿನ ಬಂಡಿಯೊಂದಿಗೆ ಮುಂದುವರಿದ ರೈತರ ಅಹೋರಾತ್ರಿ ಪ್ರತಿಭಟನೆ

oppo_2
oppo_2
Published on

ಕಲಬುರಗಿ: ಹಾನಿಗೀಡಾದ ತೊಗರಿಗೆ ಎಕರೆಗೆ 25 ಸಾವಿರ ರೂ. ನೀಡಬೇಕು ಸೇರಿದಂತೆ ಕೃಷಿ ಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕಲಬುರಗಿಯಲ್ಲಿ ಎತ್ತಿನ ಬಂಡಿಗಳೊಂದಿಗೆ ರೈತರ ಪ್ರತಿಭಟನೆ ಅಹೋರಾತ್ರಿ ಮುಂದುವರಿದಿದೆ.

ನೂರಾರು ರೈತರು ಎತ್ತಿನ ಬಂಡಿ, ಎತ್ತುಗಳೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿಯೇ ಮಲಗಿಕೊಂಡಿದ್ದು, ಹಲವು ರೈತರು ಡಿಸಿ ಕಚೇರಿ ಎದುರು ಭಜನೆ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ.

IP

ಬೇಡಿಕೆ ಈಡೇರುವವರೆಗೆ ಎತ್ತಿನ ಬಂಡಿಗಳೊಂದಿಗೆ ಹೋರಾಟ ಮುಂದುವರಿಯಲಿದೆ ಎಂದು ರೈತ ಮುಖಂಡರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net