

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಮಂಕಾಳ ವೈದ್ಯರ ಅಭಿನಂದನಾ ಬ್ಯಾನರ್ ಅನ್ನು ಕಿಡಿಗೇಡಿಗಳು ಕಿತ್ತೆಸೆದ ಘಟನೆ ಬೆಳಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಕಾಳ ವೈದ್ಯ ಅವರನ್ನು ಅಭಿನಂದಿಸಿ ಅಭಿಮಾನಿಗಳು ತಾಲೂಕಿನ ವಿವಿಧೆಡೆ ಬ್ಯಾನರ್ ಅಳವಡಿಸಿದ್ದಾರೆ.
ಈ ಪೈಕಿ ಬೆಳಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಬ್ಯಾನರ್ ಅನ್ನು ಜೂ. 18ರಂದು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಹಿಂದೆಯೂ ಬೆಳಕೆಯಲ್ಲಿ ಅಳವಡಿಸಿದ ಬ್ಯಾನರ್ ಅನ್ನು ಕಿತ್ತು ಬೇರೆಡೆಗೆ ಹಾಕಿದ್ದರು. ಈ ಕುರಿತು ಬೆಳಕೆ ನಿವಾಸಿ ನಾರಾಯಣ ನಾಯ್ಕ ದೂರು ನೀಡಿದ್ದಾರೆ.