ಅತಿಬುದ್ಧಿವಂತಿಕೆಯಿಂದ ಒಳಿತಿಗಿಂತ ಕೆಡುಕೇ ಜಾಸ್ತಿ

Too much wisdom can do more harm than good.
ಕೋನಳ್ಳಿಯಲ್ಲಿ ಚಾತುರ್ಮಾಸ್ಯನಿರತ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಶ್ರೀಗಳಿಗೆ ಭಕ್ತಾದಿಗಳು ಗುರುಪಾದುಕಾ ಪೂಜೆ ಸಲ್ಲಿಸಿದರು.
Published on

ಕುಮಟಾ: ಯಾವುದೇ ಕಾರ್ಯವನ್ನು ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಮಾಡಿದಾಗ ಆ ಕಾರ್ಯ ಯಶಸ್ವಿಯಾಗುತ್ತದೆ. ಅತಿಬುದ್ಧಿವಂತಿಕೆ ಪ್ರದರ್ಶನ ಮಾಡಲು ಹೋದರೆ ಒಳಿತಿಗಿಂತ ಕೆಡುಕೇ ಜಾಸ್ತಿ ಆಗುವುದು ಎಂದು ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಬುಧವಾರ ಚಾತುರ್ಮಾಸ್ಯ ವ್ರತಾಚರಣೆಯ 21ನೇ ದಿನದ ಕಾರ್ಯಕ್ರಮದಲ್ಲಿ ಹೆರಂಗಡಿ, ಸಾಗರ ಮತ್ತು ಶಿವಮೊಗ್ಗ ಭಾಗದ ನಾಮಧಾರಿ ಸಮಾಜದವರಿಂದ ಗುರು ಸೇವೆ ಸ್ವೀಕರಿಸಿ, ಆಶೀರ್ವಚನ ನೀಡಿದರು.

ಆಧ್ಯಾತ್ಮದ ಮೂಲಕ ವಿವೇಕದ ಬಲದಿಂದ ಮನಸ್ಸನ್ನು ನಿಯಂತ್ರಿಸಿ ಅರಿಷಡ್ವರ್ಗಗಳನ್ನು ಎದುರಿಸಬಹುದು. ಭಗವಂತ ಕೊಟ್ಟಿದ್ದನ್ನು ಬಿಟ್ಟು, ಬೇರೆ ವ್ಯವಸ್ಥೆಗೆ ಹೋಗುವುದು ಅಷ್ಟೊಂದು ಸುಲಭವಲ್ಲ. ಒಳಿತನ್ನು ಮಾಡುವ ಚಾತುರ್ಮಾಸ್ಯದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಯಥಾಶಕ್ತಿ ಸೇವೆ ಸಲ್ಲಿಸುತ್ತಿದ್ದಾರೆ. ಹೋಮಹವನಗಳ ಜತೆಗೆ ಅನ್ನದಾನ, ವಿದ್ಯಾದಾನ, ಆಧ್ಯಾತ್ಮಿಕ ದಾನದ ಮುಂತಾದ ದಾನಯಜ್ಞದ ಮೂಲಕ ಕೋನಳ್ಳಿ ವಿಶೇಷ ಯಜ್ಞಭೂಮಿಯಾಗಿ ಶೋಭಿಸುತ್ತಿದೆ. ಈ ಸತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಒಳಿತಾಗಲಿ ಎಂದು ಹರಸಿದರು.

ಹೇರಂಗಡಿ ಗ್ರಾಮ ಪಂಚಾಯಿತಿ ವಾಪ್ತಿಯ ಕೆಳಗಿನ ಮೂಡ್ಕಣಿ, ಮೇಲಿನ ಮೂಡ್ಕಣಿ, ತೊಂಬೊಳ್ಳಿ ಮೂಡ್ಕಣಿ, ಅಡಕಾರ ಮೂಡ್ಕಣಿ, ಗುಡ್ಡೆಕೇರಿ, ಹೈಗುಂದ-ಅಳ್ಳಂಕಿ ಗ್ರಾಮದ ನಾಮಧಾರಿ ಸಮಾಜದವರು ಹಾಗೂ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ, ಸಾಗರ, ಮೂಡ್ಕಣಿಯ ಶಿವರಾಮ ಸುಬ್ರಾಯ ನಾಯ್ಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಮೂಡ್ಕಣಿಯ ವೆಂಕಟೇಶ ಹನುಮಂತ ನಾಯ್ಕ ದಂಪತಿ, ವೆಂಕಟೇಶ ತಿಮ್ಮಪ್ಪ ನಾಯ್ಕ್ಕ ದಂಪತಿ ವೈಯಕ್ತಿಕ ಗುರುಪಾದುಕಾ ಪೂಜೆಗೈದರು. ಮೂಡ್ಕಣಿಯ ತಿಮ್ಮಪ್ಪ ತಿಪ್ಪಯ್ಯ ನಾಯ್ಕ ದಂಪತಿಗಳು ವಿಶೇಷ ಸೇವೆ ಸಲ್ಲಿಸಿದರು. ಕಾರವಾರದ ಅರ್ಬನ್ ವಾಟರ್ ಬೋರ್ಡ ಇಂಜಿನಿಯರ್ ಶಿವರಾಮ ನಾಯ್ಕ ಗುರುಗಳ ದರ್ಶನದೊಂದಿಗೆ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net