

ಗದಗ: ತಾಯಿಗಿಂತ ದೊಡ್ಡವರು ಯಾರೂ ಇಲ್ಲ. ತಾಯಿಯಿಂದ ಸಂಸ್ಕಾರ ಮತ್ತು ಪಾಠ ಕಲಿತವರೇ ಧನ್ಯರು. ಹುಟ್ಟಿದ ಶಿಶುವಿಗೆ ತಾಯಿಯೇ ಮೊದಲ ಗುರು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ. ಉಪ್ಪಿನ ರುಚಿಯನ್ನು ಯಾವ ವಸ್ತುವೂ ನೀಡಲು ಸಾಧ್ಯವಿಲ್ಲ. ಅದೇ ರೀತಿ ತಾಯಿಯ ಸ್ಥಾನವನ್ನೂ ಯಾರೂ ತುಂಬಲು ಸಾಧ್ಯವಿಲ್ಲ. ತಾಯಿಯ ಸ್ಥಾನ ಬಹಳಷ್ಟು ಮಹತ್ವದ್ದಾಗಿದೆ. ಅಂತಃಕರಣ, ವಾತ್ಸಲ್ಯ, ಪ್ರೀತಿ, ದಯೆ ತಾಯಿಯಲ್ಲಿರುವ ವಿಶೇಷ ಗುಣಗಳು. ಪ್ರಾಚಿನ ಕಾಲದಿಂದಲೂ ತಂದೆ ತಾಯಿಗಳನ್ನು ಗೌರವಿಸುವ ಸಂಸತಿ ನಮ್ಮದು. ಮಕ್ಕಳೂ ಸಹಿತ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳದೇ ಪಾಲನೆ ಪೋಷಣೆ ಸಂರಣೆ ಮಾಡಬೇಕು. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ವಿಶೇಷ ಯೋಜನೆಗಳು ಜಾರಿಯಲ್ಲಿವೆ. ಸಮಾಜದಲ್ಲಿ ಹೆಣ್ಣುಮಕ್ಕಳು ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಉಪಯೋಗ ಮಾಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.
ಅವ್ವನ ಮಮತೆ ವಿಷಯ ಕುರಿತು ಸ್ತ್ರೀರೋಗ ತಜ್ಞೆ ಡಾ. ತೇಜಸ್ವಿನಿ ಹಿರೇಮಠ ಮಾತನಾಡಿ, ತ್ಯಾಯಿಯ ತ್ಯಾಗ ದೊಡ್ಡದು. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಹೆಣ್ಣಿಗೆ ಪ್ರೆಗ್ನೇಸಿ, ಮುಟ್ಟಿನ ಸಮಸ್ಯೆ, ರಕ್ತನಹೀನತೆ, ಮಾನಸಿಕ ದೌರ್ಬಲ್ಯಗಳು ಅನೇಕ ಸಮಸ್ಯೆಗಳು ಕಾಡುತ್ತಿರುತ್ತವೆ. ಈ ಸಮಯದಲ್ಲಿ ಪರಿವಾರದವರ ಸಹಾಯ, ಸಹಕಾರ, ಕಾಳಜಿ ಬಹಳ ಅವಶ್ಯ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸಮಾಜದಲ್ಲಿ ಹೆಣ್ಣು ಅಂದರೆ ನಿರ್ಲಕ್ಷ$್ಯಭಾವ ಇದೆ. ಆ ಭಾವ ತೊರೆದು ಪ್ರತಿಹಂತದಲ್ಲೂ ಸ್ಪಂದನೆ, ಪ್ರೋತ್ಸಾಹ ಲಭಿಸಬೇಕು ಎಂದು ಅಭಿಪ್ರಾಯಪಟ್ಟರು.
ರತ್ನವ್ವ ಚನ್ನವಿರಪ್ಪ ಕ್ಯಾಡದ, ಮಹಾದೇವಿ ಈಶ್ವರಪ್ಪ ಅರಳಿ, ಜ್ಯೋತಿ ಅಶೋಕ ಅಗಸನಕೊಪ್ಪ ಅವರನ್ನು ಸನ್ಮಾನಿಸಲಾಯಿತು.
ಗುರುನಾಥ ಸುತಾರ, ಅಶೋಕ ಸುತಾರ, ಕುಮಾರಸ್ವಾಮಿ ಹಿರೇಮಠ, ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇದ್ದರು.