ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೆ, ಸ್ಮಾರಕ ಪ್ರಶಸ್ತಿ ಸಮಾರಂಭ! ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ

25GDG02A
ಗದಗ ತೋಂಟದಾರ್ಯ ಮಠದ ಆವರಣದಲ್ಲಿ ಮಂಗಳವಾರ ಜರುಗಿದ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್​ ಅಧಿಕಾರಿ ಎಸ್​.ಎಂ. ಜಾಮದಾರ ಅವರಿಗೆ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಎಚ್​.ಕೆ. ಪಾಟೀಲ, ಬಸವರಾಜ ಹೊರಟ್ಟಿ, ಸಿದ್ಧರಾಮ ಶ್ರಿಗಳು, ಡಿ.ಆರ್​. ಪಾಟೀಲ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಕಪ್ಪತಗುಡ್ಡ ಉಳಿಸಲು ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಹೋರಾಟ ದೊಡ್ಡದು. ಅವರ ಪ್ರತಿಭಟನೆ ಲವಾಗಿಮ ಕಪ್ಪತಗುಡ್ಡ ಉಳಿದು, ಜಿಲ್ಲೆಯಲ್ಲಿ ಅತೀ ಶುದ್ಧವಾದ ಗಾಳಿ ಬೀಸುತ್ತಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದ ಆವರಣದಲ್ಲಿ ಮಂಗಳವಾರ ಜರುಗಿದ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೆ, ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಸಮಾರಂಭ ಹಾಗೂ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನೆಲ, ಜಲ, ಪರಿಸರದ ರಕ್ಷಣೆಗೆ ಸಿದ್ಧಲಿಂಗ ಶ್ರೀಗಳ ಹೋರಾಟಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಪುಸ್ತಕಗಳ ಬಗ್ಗೆ ಸಿದ್ಧಲಿಂಗ ಶ್ರೀಗಳಿಗೆ ಅಪಾರ ಪ್ರೀತಿ. ಮಠದಿಂದ 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕರಣೆ ಮಾಡಲಾಗಿದೆ. ಮಠಗಳಲ್ಲಿ ಪುಸ್ತಕೋತ್ಸವ ಚೆಂದ ಎಂದು ಸಿದ್ಧರಾಮ ಶ್ರೀಗಳು ಹೇಳಿದರು. ಬಸತತ್ವ ಎಂಬುದು ಕೇವಲ ಮಾತನಾಡುವ ವಸ್ತು ಆಗಬಾರದು. ಅದನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಿಜಗುಣಾನಂದ ಶ್ರೀಗಳು ಮಾತನಾಡಿ, ಹುಟ್ಟು ಶ್ರೇಷ್ಠ ಅಲ್ಲ. ಸಾವು ಕನಿಷ್ಠವೂ ಅಲ್ಲ. ಬದುಕು ಶ್ರೇಷ್ಠ. ಬದುಕಿನ ಮಾರ್ಗ ತೋರಿಸಿದವರೇ ಶರಣರು. ಶರಣರು ನಿಸರ್ಗದೊಂದಿಗೆ ಬದುಕುದನ್ನು ಕಲಿಸಿದ್ದಾರೆ. ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಜೀವನ ನಮಗೆಲ್ಲ ಆದರ್ಶ ಮತ್ತು ಸಂದೇಶ. ಬಸವತತ್ವದಂತೆಯೇ ನಡೆದಿದ್ದಾರೆ ಎಂದರು.

ಸಚಿವ ಎಚ್​.ಕೆ. ಪಾಟೀಲ ಮಾತನಾಡಿ,ಮಹಿಳೆಗೆ ಸಮಾನತೆ ನೀಡಬೇಕೆಂದು ಬಸವಣ್ಣನವರ ಆಗ್ರಹವಾಗಿತ್ತು. ಸಂವಿಧಾನದಲ್ಲಿ ಇರುವ ಅಂಶಗಳೆಲ್ಲವೂ ಬಸವಣ್ಣನವರು ಆಶೋಕ್ತಿಗಳೇ ಆಗಿವೆ. ಮಹಿಳೆ ಸಮಾನತೆ ನಿಡುವ ಕಾರ್ಯ ಸಂವಿಧಾನ ಮೂಲಕ ಆಗುತ್ತಿದೆ ಎಂದರು.
ಇತ್ತೀಚೆಗೆೆ ಶರಣರ ಸಂದೇಶ, ವಚನಗಳು ಅಶಕ್ತವಾಗುತ್ತಿವೆ. ಅನಾರೋಗ್ಯ ಸಮಾಜಕ್ಕೆ ಚಿಕಿತ್ಸೆ ಆಗಬೇಕಿದೆ. ಸಾಮಾಜಿಕ, ಧಾಮಿರ್ಕ, ರಾಜಕೀಯ ಉತ್ತಮ ವಾತಾವರಣ ಸೃಷ್ಟಿಯಾಗಿಲು ಶರಣ ಸಂದೇಶ, ವಚನಗಳ ಅನುಷ್ಠಾನ ಪರಿಣಾಮಕಾರಿ ಆಗಬೇಕು ಎಂದರು. ಸಿದ್ಧಲಿಂಗ ಶ್ರೀಗಳ ಕನ್ನೆ ಪರ ಚಳವಳಿಯನ್ನು ಸ್ಮರಿಸಿದ ಅವರು ಗೋಕಾಕ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು ಎಂದು ಎಚ್​.ಕೆ. ಪಾಟೀಲ ಹೇಳಿದರು.

ಎಸ್​.ಎಂ. ಜಾಮದಾರ ಕುರಿತು ಮಾತನಾಡಿದ ಎಚ್​.ಕೆ. ಪಾಟೀಲ, ಪ್ರಾಮಾಣಿಕತನ ಎಂಬುದು ತಪಸ್ಸು ಇದ್ದಂತೆ. ಇದರಿಂದ ಲೌಕಿಕ ಬದುಕಿನಲ್ಲಿ ನಷ್ಟವೇ ಹೆಚ್ಚು. ಎಲ್ಲವನ್ನೂ ಮೆಟ್ಟಿ ಜಾಮದಾರ ಅವರು ಪ್ರಮಾಣಿಕ ಕೆಲಸ ಮಾಡಿದ್ದಾರೆ. ಸ್ಮಾರಕ ಪ್ರಶಸ್ತಿಗೆ ಅವರು ಅರ್ಹರು ಎಂದರು.
ಎಸ್​.ಎಂ. ಜಾಮದಾರ ಅವರಿಗೆ ತೋಂಟದಾರ್ಯ ಶ್ರೀಗಳ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್​.ಎಂ. ಜಾಮದಾರ, "ಲಿಂಗಾಯತ ಮೀಸಲಾತಿ' ಎಂಬುದು ಅಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಪ್ರಶಸ್ತಿ ಸಮೇತ ಪಡೆದಿದ್ದ 5 ಲಕ್ಷ ರೂ. ನಗದನ್ನು ತೋಂಟದಾರ್ಯ ಮಠಕ್ಕೆ ಮರಳಿಸಿ ಔದಾರ್ಯ ಮೆರೆದರು.

ಕಾರ್ಯಕ್ರಮದಲ್ಲಿ 5 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸಕ್ತಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಡಿ. ಆರ್​. ಪಾಟೀಲ, ಐ. ಜಿ. ಸನದಿ, ಗುರುಬಸವ ಶ್ರೀಗಳು, ಶಾಂತಲಿಂಗ ಶ್ರೀಗಳು, ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಗಂಗಾಧರ ಶ್ರೀಗಳು, ಮಹಾಂತ ಶ್ರೀಗಳು, ಗುಣಲಿಂಗ ಶ್ರೀಗಳು, ಎಸ್​. ಎಸ್​. ಪಟ್ಟಣಶೆಟ್ಟಿ ಇದ್ದರು.

ಹೊರಟ್ಟಿ ವಿಷಾಧ:
ಈಗೀಗ ಕೆಲ ಸ್ವಾಮೀಗಳು ರಾಜಕಾರಣಿಗಳಂತೆ ವತಿರ್ಸುತ್ತಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿಷಾಧ ವ್ಯಕ್ತಪಡಿಸಿದರು. ಮಠದಲ್ಲಿ ಪ್ರವಚನ ಮಾಡುವ ಮೂಲಕ ಭಕ್ತರ ದುಃಖ ದೂರ ಮಾಡಬೇಕಾದ ಸ್ವಾಮೀಗಳು ಪ್ರತಿಭಟನೆ ಮಾಡಲು ಮುಂಚೂಣಿಯಲ್ಲಿ ಇರುತ್ತಾರೆ. ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತಾರೆ. ರಾಜಕಾರಣಿಗಳು, ಹೋರಾಟಗಾರರು ಮಾಡುವುದನ್ನು ಸ್ವಾಮೀಗಳು ಮಾಡಿದರೆ ನಮಗೂ ನಿಮಗೂ ವ್ಯತ್ಯಾಸವೇನು? ಹಿರಿಯ ಶ್ರೀಗಳು ಕಿರಿಯ ಶ್ರಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದರು.

ಕೋಟ್​:
ತೋಂಟದ ಸಿದ್ಧಲಿಂಗ ಶ್ರೀಗಳ ನೇರಮಾತು ಕಠೋರವಾಗಿರುತ್ತಿದ್ದವು ಮತ್ತು ಸತ್ಯವೇ ಆಗಿರುತ್ತಿತ್ತು. ಅವರು ವಿಶ್ವವಿದ್ಯಾಲ ಇದ್ದಂತೆ ಇದ್ದರು. ಪ್ರತಿಯೊಂದು ವಿಷಯದಲ್ಲಿ ಪಾಂಡಿತ್ಯ ಪಡೆದಿದ್ದರು. ಬಸವಣ್ಣನವರ ತತ್ವಗಳನ್ನು ನೂರಕ್ಕು ನೂರರಷ್ಟು ಸಿದ್ಧಲಿಂಗ ಶ್ರೀಗಳು ಅಳವಡಿಸಿಕೊಂಡಿದ್ದರು.
ಬಸವರಾಜ ಹೊರಟ್ಟಿ, ಸಭಾಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net