

ವಿಜಯವಾಣಿ ಸುದ್ದಿಜಾಲ ಗದಗ
ಹರ್ಡೇಕರ ಮಂಜಪ್ಪನವರು ಅಪ್ಪಟ ಗಾಂಧಿ ವಾದಿಗಳಾಗಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ, ಭಿತ್ತುವಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಹರ್ಡೇಕರ ಮಂಜ್ಜಪ್ಪನವರ ಬದುಕು ಮತ್ತು ಜೀವನಾದರ್ಶಗಳು ಅನುಕರಣೀಯ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಸೋಮವಾರ ಜರುಗಿದ ಶಿವಾನುಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನರಿಗೆ ಒಳ್ಳೆಯದನ್ನು ಕೊಡುವುದೇ ಶಿವಾನುಭವ. ನಡೆನುಡಿಗಳನ್ನು ಪರಿಶುದ್ಧವಾಗಿ ಇಟ್ಟುಕೊಂಡಾಗ ಮನಸ್ಸು ಒಳ್ಳೆಯದನ್ನು ಯೋಚಿಸುತ್ತದೆ. ಬೆಳಗಾವಿಯ ಕಾಂಗ್ರೆಸ್ ಸಭೆಯಲ್ಲಿ ಮೊಟ್ಟ ಮೊದಲು ಬಸವಣ್ಣನವರ ವಚನಗಳನ್ನು ಇಂಗ್ಲೀಷ್ಗೆ ಭಾಷಾಂತರಿಸಿ ಗಾಂಧೀಜಿಯವರಿಗೆ ಕೊಡುವ ಮೂಲಕ ಪರಿಚಯಿಸಿದರು. ಮಂಜಪ್ಪನವರು ಗಾಂಧೀಜಿಯವರ ಪ್ರತಿರೂಪ. ಸಮಾಜ ಸೇವೆಗಾಗಿ ಮದುವೆಯಾಗದೇ ಬದುಕಿದರು ಎಂದರು.
ಬೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿ, ಹರ್ಡೇಕರ ಮಂಜ್ಜಪ್ಪನವರು ಬನವಾಸಿಯಲ್ಲಿ ಜನಿಸಿ, ಅಲ್ಲಿಯೇ ಶಾಲೆ ಕಲಿತು, ಕಲಿತ ಶಾಲೆಯಲ್ಲಿಯೇ ಶಿಕರಾಗಿ ಸಮಾಜದ ಏಳ್ಗೆಗಾಗಿ ಶ್ರಮಿಸಿದರು. .ಗು ಹಳಕಟ್ಟಿಯವರು, ಡೆಪ್ಯುಟಿ ಚನ್ನಬಸಪ್ಪನವರು, ಹರ್ಡೇಕರ್ ಮಂಜಪ್ಪನವರು ಲಿಂಗಾಯತ ಧರ್ಮಕ್ಕೆ ಮೇರು ವ್ಯಕ್ತಿತ್ವ ತಂದು ಕೊಟ್ಟವರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಬಸವರಾಜ ಕೆಂಧೂಳಿ ಮಾತನಾಡಿ, ಸಾರ್ಥಕ ಜೀವನದ ಸೂತ್ರಗಳು ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಶಿರೋಳ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯರು ಮತ್ತು ಪದಾ-ಧಿಕಾರಿಗಳನ್ನು ಸನ್ಮಾನಿಸಲಾಯಿತು.
ಬಾಲಚಂದ್ರ ಭರಮಗೌಡ್ರ, ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ ಇತರರು ಇದ್ದರು.