

ಗದಗ: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ತಲುಪಿ ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಅದ್ಭುತ ಘಟನೆ. ವಿಶ್ವದಲ್ಲಿಯೇ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆಯಿಟ್ಟ ಪ್ರಥಮ ದೇಶ. ವಿಶ್ವದ ಗಮನವನ್ನೇ ಭಾರತ ತನ್ನತ್ತ ಸೆಳೆದಿದೆ ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ತಿಳಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೬೫೬ ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ೧೨ ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಇದು ಜಗತ್ತಿನ ಮೊಟ್ಟಮೊದಲ ಸಂಸತ್ತು, ಲೋಕಸಭೆ ಆಗಿದೆ. ಈ ಅನುಭವ ಮಂಟಪದಲ್ಲಿ ೭೭೦ ಸದಸ್ಯರು ಕೂಡಿಕೊಂಡು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಪ್ರಗತಿಗಳ ಕುರಿತು ಚರ್ಚೆ ಮಾಡುತ್ತಿದ್ದರು. ಭಾರತ ಜಾಗತಿಕಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರೆದಿರುವ ನಾಲ್ಕನೇ ರಾಷ್ಟçವಾಗಿದೆ. ಚಂದ್ರಯಾನ-೩ ವಿಜ್ಞಾನಿಗಳ ಸಾಧನೆಗೆ ಭಾರತೀಯರೆಲ್ಲರೂ ಹೆಮ್ಮೆಪಡುವಂತಾಗಿದೆ. ಇಸ್ರೋದಲ್ಲಿ ಗದುಗಿನ ನಾಲ್ವರು ವಿಜ್ಞಾನಿಗಳಿರುವುದು ಅಭಿಮಾನ ಮತ್ತು ಸಂತೋಷದ ಸಂಗತಿಯಾಗಿದೆ. ಈ ಅಭೂತಪೂರ್ವ ಯಶಸ್ಸಿನಿಂದ ಭಾರತಕ್ಕೆ ವಿಶ್ವದಲ್ಲಿ ವಿಶೇಷ ಮನ್ನಣೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ರಾಮಚಂದ್ರ ಮೋನೆ, ಆಧ್ಯಾಪಕರು, ವಿ.ಡಿ.ಎಸ್.ಟಿ.ಸಿ. ಹೈಸ್ಕೂಲ್ ಗದಗ ಅವರು ಉಪನ್ಯಾಸ ನೀಡಿ ಚಿಕ್ಕಂದಿನಿAದಲೂ ಚಂದಾಮಾಮನ ಹಾಡು ಮತ್ತು ಕಥೆಗಳನ್ನು ಕೇಳುತ್ತ ಬೆಳೆದಿದ್ದೇವೆ. ಅನೇಕ ಖನಿಜಾಂಶಗಳು ಚಂದ್ರನ ಮೇಲೆ ಲಭ್ಯವಿದ್ದು, ಪ್ರಗ್ಯಾನ್ ರೋವರ್ ಚಂದ್ರನ ಮೇಲಿನ ಸೂಕ್ಷö್ಮ ಅಂಶಗಳ ಬಗ್ಗೆ ಮಾಹಿತಿ ಕಳಿಸುತ್ತಿದೆ. ಪ್ರಪಂಚದ ಅನೇಕ ರಾಷ್ಟçಗಳು ಅಂತರಿಕ್ಷ ವಿಜ್ಞಾನದಲ್ಲಿ ನಮ್ಮ ದೇಶದಷ್ಟು ನೈಪುಣ್ಯತೆ ಹೊಂದಿಲ್ಲ ಎಂದು ತಿಳಿಸಿದರು. ೨೦೨೯ ನೇ ವರ್ಷಕ್ಕೆ ಭಾರತ ಆರ್ಥಿಕವಾಗಿ ಬಲಿಷ್ಠ ರಾಷ್ಟçವಾಗಲಿದೆ. ಇಸ್ರೋದಲ್ಲಿ ಗದಗ ನಗರದ ನಾಲ್ಕುಜನ ವಿಜ್ಞಾನಿಗಳು ಕಾರ್ಯನಿರ್ವಹಿಸಿರುವುದು ಅತ್ಯಂತ ಹೆಮ್ಮೆಪಡುವ ಸಂಗತಿ. ರಾಕೇಟ್ ಕುರಿತು ಅನೇಕ ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಸಿದ್ದು ಸತ್ಯಣ್ಣವರ ಸಾಹಿತಿಗಳು ಮಾತನಾಡಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ನಾವು ೩೦ ಜನರಿದ್ದು, ನಾವು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೆಳೆಯಲು ಶ್ರೀಗಳವರ ಪ್ರೋತ್ಸಾಹ ಮತ್ತು ಪ್ರಭಾವ ಕಾರಣ. ಅಂತಹ ಗುರುಗಳ ಹೆಸರಿನಲ್ಲಿ ಇಂದು ಸಾಹಿತ್ಯ ಪುರಸ್ಕಾರ ನೀಡಲು ಚಾಲನೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಡಂಬಳದಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಪೂಜ್ಯ ಕಮಲಮ್ಮ ತಾಯಿ, ಆಧ್ಯಾತ್ಮ ಆಶ್ರಮ ಹಳೇ ಹುಬ್ಬಳ್ಳಿ ಅವರು ಪ್ರವಚನ ನೀಡಿದರು. ೨೦೨೩ ನೇ ಸಾಲಿನ ಡಾ. ತೋಂಟದ ಸಿದ್ಧಲಿಂಗಶ್ರೀ ಕಥಾ ಪುರಸ್ಕಾರವನ್ನು ಮಂಜು ನಾಯಕ ಚೆಳ್ಳೂರು ಇವರಿಗೆ ಪ್ರದಾನ ಮಾಡಲಾಯಿತು. ಇಂಡಿಯಾಜ್ ವರ್ಲ್ಡ ರೆಕಾರ್ಡ ಸಾಧಿಸಿದ ಬಾಲಪ್ರತಿಭೆ ಕುಮಾರ ಪರೀಕ್ಷಿತ ಎಸ್. ಶಿರೂರ ಪ್ರತಿಭಾ ಪ್ರದರ್ಶನ ಜರುಗಿತು.
ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಕು ಸೃಷ್ಠಿ ಎಂ. ಹಬೀಬ ಧರ್ಮಗ್ರಂಥ ಪಠಣಗೈದರು, ಕು ಮೇಧಾ ಎಸ್. ಹಂಡಿ ಇವರಿಂದ ವಚನ ಚಿಂತನ ನಡೆಯಿತು. ಶಿವಾನುಭವ ಭಕ್ತಿಸೇವೆಯನ್ನು ವಹಿಸಿದ್ದ ಭಕ್ತಿಸೇವೆಯನ್ನು ಡಾ. ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ ಸಮಿತಿ, ಲಿಂ. ಹೊನ್ನಪ್ಪಗೌಡ ಬಿರಾದಾರ, ಲಿಂ. ಲಕ್ಷಿö್ಮಬಾಯಿ ಬಿರಾದಾರ ಇವರ ಸ್ಮರಣಾರ್ಥ ಕುಟುಂಬವರ್ಗದವರು, ಚನ್ನಬಸಯ್ಯ ಶಿ. ಕನಕೇರಿಮಠ, ಗಿರಿಜಾದೇವಿ ಚ. ಕನಕೇರಿಮಠ, ರೇವಣ್ಣ ಚ. ಬ್ಯಾಕೋಡ ಇವರನ್ನು ಶ್ರೀಗಳು ಸನ್ಮಾನಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.